ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ
 
ಚೇತರಿಸಿಕೊಂಡ ರೂಪಾಯಿ
ಒಂದು ಕಡೆಯಿಂದ ತೈಲ ಸಂಸ್ಕರಣೆ ಘಟಕಗಳಿಂದ ಡಾಲರ್‌ಗೆ ಹೆಚ್ಚಿದ ಬೇಡಿಕೆ ಮತ್ತು ಇನ್ನೊಂದೇಡೆ ಶೇರು ಮಾರುಕಟ್ಟೆಗೆ ಹರಿದು ವಿದೇಶಿ ಬಂಡವಾಳದಿಂದ ರೂಪಾಯಿ ಮಂಗಳವಾರ ವಿದೇಶಿ ವಿನಿಮಯ ವಹಿವಾಟಿನಲ್ಲಿ ಡಾಲರ್ ಎದುರು ಅಲ್ಪ ಪ್ರಮಾಣದಲ್ಲಿ ಚೇತರಿಸಿಕೊಂಡಿತು.

ಸಾಧಾರಣ ಮಟ್ಟದಲ್ಲಿ ಚುರುಕಾಗಿದ್ದ ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ವಹಿವಾಟಿನಲ್ಲಿ ರೂಪಾಯಿಯು ಡಾಲರ್ ಎದುರು ನಡೆದ ವಹಿವಾಟಿನಲ್ಲಿ ತನ್ನ ಮೌಲ್ಯವನ್ನು 40.90/91 ರೂಗಳಿಗೆ ಸ್ಥಿರಗೊಳಿಸಿತು. ಸೋಮವಾರದ ವಹಿವಾಟಿನ ಅಂತ್ಯದಲ್ಲಿ ಪ್ರತಿ ಡಾಲರ್ ಬೆಲೆ
ಕಚ್ಚಾ ತೈಲದ ಬೆಲೆ, ಏಷಿಯಾ ಮಾರುಕಟ್ಟೆಯಲ್ಲಿ ಏರಿಕೆಯಾಗುತ್ತಿರುವುದರಿಂದ ಡಾಲರ್‌ಗೆ ತೈಲ ಕಂಪನಿಗಳಿಂದ ಬೇಡಿಕೆ ಹೆಚ್ಚುತ್ತಿದೆ.

ಕಳೆದ ಅಗಸ್ಟ್ ತಿಂಗಳಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬಂಡವಾಳವನ್ನು ಭಾರತೀಯ ಹಣಕಾಸು ಮಾರುಕಟ್ಟೆಯಿಂದ ಬೃಹತ್ ಪ್ರಮಾಣದಲ್ಲಿ ಹಿಂದೆ ತೆಗೆದುಕೊಂಡಿದ್ದರಿಂದ ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಿತ್ತು. ಸೆಪ್ಟಂಬರ್ ತಿಂಗಳ ಮೊದಲ ವಾರದಲ್ಲಿ ವಿದೇಶಿ ಬಂಡವಾಳದ ಒಳ ಹರಿವು ಹೆಚ್ಚಾಗಿದ್ದು, ದಿನಕಳೆದಂತೆ ಬಂಡವಾಳ ಕ್ಷೇತ್ರಕ್ಕೆ ಇನ್ನಷ್ಟು ವಿದೇಶಿ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ.
ಮತ್ತಷ್ಟು
ಮತ್ತೆ ರೂಪಾಯಿ ಮೌಲ್ಯದಲ್ಲಿ ಕುಸಿತ
ರೂಪಾಯಿ ಮೌಲ್ಯದಲ್ಲಿ ಕುಸಿತ
ವಿದೇಶಿ ವಿನಿಮಯ: ಕುಸಿಯುತ್ತಿರುವ ರೂ ಮೌಲ್ಯ
ವಿದೇಶಿ ವಿನಿಮಯ: ರೂಪಾಯಿ ಮೌಲ್ಯ ಕುಸಿತ
ಬಂಡವಾಳ ನಿಯಂತ್ರಣಕ್ಕೆ ಆರ್ ಬಿ ಐ ಕ್ರಮ
ರೂಪಾಯಿ ಮೌಲ್ಯ ಮತ್ತೆ ಕುಸಿತ