ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ
 
ರೂಪಾಯಿ ಮೌಲ್ಯದಲ್ಲಿ ಏರಿಕೆ
ಅಮೆರಿಕದ ಡಾಲರ್ ಮತ್ತು ರೂಪಾಯಿ ನಡುವಿನ ವಿದೇಶಿ ವಿನಿಮಯ ವ್ಯವಹಾರದಲ್ಲಿ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಿದ್ದು, ಕಳೆದ ಐದು ವಾರಗಳ ಹಿಂದಿನ ಮೌಲ್ಯವನ್ನು ಮಂಗಳವಾರದ ವಿದೇಶಿ ವಿನಿಮಯ ವಹಿವಾಟಿನಲ್ಲಿ ದಾಖಲಿಸಿತು.

ಏಷಿಯಾದ ಶೇರು ಮಾರುಕಟ್ಟೆಗಳಲ್ಲಿನ ಉತ್ಸಾಹಕರ ವಾತಾವರಣದಿಂದ ಪ್ರಭಾವಿತವಾಗಿರುವ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಭಾರಿ ಪ್ರಮಾಣದಲ್ಲಿ ಬಂಡವಾಳ ತೋಡಗಿಸುವುದಕ್ಕೆ ಮುಂದಾದರು. ಡಾಲರ್ ರೂಪದಲ್ಲಿ ಬಂಡವಾಳದ ನಿರಂತರ ಹರಿವು, ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗುವಂತೆ ಮಾಡಿತು.


ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಸಾಧಾರಣವಾಗಿ ಪ್ರತಿ ಡಾಲರ್ ಬೆಲೆ 40.61/62ಯಿಂದ ಪ್ರಾರಂಭವಾಯಿತು. ವಹಿವಾಟು ಮುಂದುವರಿದಂತೆ ಡಾಲರ್ ಒಳಹರಿವು ನಿದಾನವಾಗಿ ವೇಗ ಪಡೆದುಕೊಂಡಿತು. ಮೊದಲ ಅವಧಿಯ ವಹಿವಾಟಿನ ಅಂತ್ಯಕ್ಕೆ ಪ್ರತಿ ಡಾಲರ್ ಮೌಲ್ಯ 40.55/56 ರೂಗಳಿಗೆ ತಲುಪಿತು.
ಮತ್ತಷ್ಟು
ವಿದೇಶಿ ವಿನಿಮಯ: ಸ್ಥಿರತೆ ಸಾಧಿಸಿದ ರೂಪಾಯಿ
ಚೇತರಿಸಿಕೊಂಡ ರೂಪಾಯಿ
ಮತ್ತೆ ರೂಪಾಯಿ ಮೌಲ್ಯದಲ್ಲಿ ಕುಸಿತ
ರೂಪಾಯಿ ಮೌಲ್ಯದಲ್ಲಿ ಕುಸಿತ
ವಿದೇಶಿ ವಿನಿಮಯ: ಕುಸಿಯುತ್ತಿರುವ ರೂ ಮೌಲ್ಯ
ವಿದೇಶಿ ವಿನಿಮಯ: ರೂಪಾಯಿ ಮೌಲ್ಯ ಕುಸಿತ