ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ
 
ವಿದೇಶಿ ವಿನಿಮಯ ರೂ ಮೌಲ್ಯ ಸ್ಥಿರ
ಭಾರತೀಯ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಮೆರಿಕದ ಡಾಲರ್‌ಗೆ ಬೇಡಿಕೆ ಕಡಿಮೆ ಇದ್ದಿದ್ದರಿಂದ ಮತ್ತು ಜಾಗತಿಕ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಕುಸಿತಕ್ಕೆ ಒಳಗಾಗಿದ್ದರಿಂದ ರೂಪಾಯಿ ತನ್ನ ಮೌಲ್ಯದಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ವಹಿವಾಟು ಸಾಧಾರಣವಾಗಿತ್ತು. ದಿನದ ವಿನಿಮಯ ವಹಿವಾಟನ್ನು ಪ್ರತಿ ಡಾಲರ್‌ಗೆ 40.40/42 ರೂ ಪೈಸೆಗಳಂತೆ ಪ್ರಾರಂಭವಾಗಿ, 40.44/45 ರೂ ಪೈಸೆಗಳಂತೆ ಅಂತ್ಯಗೊಂಡಿತು.

ವಿದೇಶಿ ವಿನಿಮಯದಲ್ಲಿ ರೂಪಾಯಿ ಮೌಲ್ಯದಲ್ಲಿ ಸ್ಥಿರತೆ ಸಾಧಿಸಲು ಡಾಲರ್ ಮೌಲ್ಯದಲ್ಲಿ ಕುಸಿತ ಮತ್ತು ಭಾರಿ ಪ್ರಮಾಣದಲ್ಲಿ ಬಂಡವಾಳ ಹರಿದು ಬರುವು ನಿರೀಕ್ಷೆ ಕಾರಣ ಎಂದು ವಿದೇಶಿ ವಿನಿಮಯ ವರ್ತಕರು ಹೇಳಿದರು.

ರೂಪಾಯಿ ಮೌಲ್ಯದ ಏರಿಕೆಯ ಲಾಭವನ್ನು ತೈಲ ಕಂಪನಿಗಳು ಪಡೆದು ಭಾರಿ ಪ್ರಮಾಣದಲ್ಲಿ ಡಾಲರ್ ಖರೀದಿಗೆ ಮುಂದಾದವು.

ಮೊದಲ ಬಾರಿಗೆ ಪ್ರತಿ ಬ್ಯಾರೆಲ್ ಬೆಲೆ 80 ಅಮೆರಿಕನ್ ಡಾಲರ್ ತಲುಪಿದೆ ಎಂದು ನ್ಯೂಯಾರ್ಕ್ ಮಾರುಕಟ್ಟೆ ಮೂಲಗಳು ತಿಳಿಸಿವೆ.
ಮತ್ತಷ್ಟು
ಉತ್ತರಾಭಿಮುಖವಾಗಿರುವ ರೂಪಾಯಿ ಮೌಲ್ಯ
ರೂಪಾಯಿ ಮೌಲ್ಯದಲ್ಲಿ ಏರಿಕೆ
ವಿದೇಶಿ ವಿನಿಮಯ: ಸ್ಥಿರತೆ ಸಾಧಿಸಿದ ರೂಪಾಯಿ
ಚೇತರಿಸಿಕೊಂಡ ರೂಪಾಯಿ
ಮತ್ತೆ ರೂಪಾಯಿ ಮೌಲ್ಯದಲ್ಲಿ ಕುಸಿತ
ರೂಪಾಯಿ ಮೌಲ್ಯದಲ್ಲಿ ಕುಸಿತ