ಸುಮಾರು 9 ವರ್ಷಗಳ ನಂತರ ಡಾಲರ್ ಎದುರು ರೂಪಾಯಿ ಮೌಲ್ಯ 40ರ ಗಡಿ ದಾಟಿ 39.90/91 ರೂಪಾಯಿ ತಲುಪಿತು. ಡಾಲರ್ ಮತ್ತು ರೂಪಾಯಿ ನಡುವಿನ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 30 ಪೈಸೆಗಳ ತೀವ್ರ ಕುಸಿತ ಅನುಭವಿಸಿತು.
ಡಾಲರ್ ರೂಪದಲ್ಲಿ ಭಾರಿ ಪ್ರಮಾಣದಲ್ಲಿ ಬಂಡವಾಳ ಭಾರತೀಯ ಶೇರು ಮಾರುಕಟ್ಟೆಯನ್ನು ಪ್ರವೇಶಿಸಿತು. ಅಮೆರಿಕದಲ್ಲಿ ಬಡ್ಡಿ ದರ ಕಡಿಮೆಯಾಗಿರುವ ಹಿನ್ನಲೆಯಲ್ಲಿ ಅಪಾರ ಪ್ರಮಾಣದಲ್ಲಿ ವಿದೇಶಿ ಬಂಡವಾಳ ಹರಿದು ಬರುತ್ತಿದೆ.
ಬುಧವಾರ ಅಂತ್ಯಗೊಂಡ ಶೇರು ಮತ್ತು ವಿದೇಶಿ ವಿನಿಮಯ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 40.20/21 ರೂ. ಪೈಸೆ ಇತ್ತು.
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್, ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಮಂಗಳವಾರ ಕಡಿತಗೊಳಿಸಿ ಆದೇಶ ಹೊರಡಿಸಿದೆ. ಪರಿಣಾಮವಾಗಿ ಮೇ 13,1998 ರ ನಂತರ ಮೊದಲ ರೂಪಾಯಿ ಮೌಲ್ಯ 40 ರೂಗಳಿಗೆ ಕೆಳಗೆ ಬಂದಿಗೆ ಮೇ 13, 1998ರಂದು ಕೊನೆಗೊಂಡ ವಿದೇಶಿ ವಿನಿಮಯ ವಹಿವಾಟಿನಲ್ಲಿ ರೂಪಾಯಿ ಮೌಲ್ಯ 39.85 ದಾಖಲಾಗಿತ್ತು.
ಬಡ್ಡಿದರದಲ್ಲಿ ಕಡಿತ, ಭಾರತೀಯ ಶೇರು ಮಾರುಕಟ್ಟೆಗೆ ಬಂಡವಾಳ ಹರಿದು ಬರುವ ನಿರೀಕ್ಷೆಯನ್ನು ವಿದೇಶಿ ವಿನಿಮಯ ವರ್ತಕರು ವ್ಯಕ್ತಪಡಿಸಿದ್ದರು. ಭಾರತೀಯ ಶೇರು ಮಾರುಕಟ್ಟೆ ಮತ್ತು ಆರ್ಥಿಕ ಬೆಳವಣಿಗೆ ಡಾಲರ್ ಹರಿದು ಬರಲು ಕಾರಣ ಎಂದು ಶೇರು ಮಾರುಕಟ್ಟೆ ವಿಶ್ಲೇಷಿಸಿದೆ.
|