ಸೋಮವಾರದ, ಮುಂಜಾನೆಯ ವಿದೇಶಿ ವಿನಿಮಯ ವಹಿವಾಟಿನಲ್ಲಿ ಡಾಲರ್ ಎದುರು ರೂಪಾಯಿ ತನ್ನ ಮೌಲ್ಯದಲ್ಲಿ ನಾಲ್ಕು ಪೈಸೆಗಳಷ್ಟು ಹೆಚ್ಚಿಸಿಕೊಂಡಿತು.
ಏಷಿಯಾದ ಶೇರು ಮಾರುಕಟ್ಟೆಗಳಲ್ಲಿನ ಚುರುಕಿನ ಶೇರು ಖರೀದಿ ಮತ್ತು ಭಾರಿ ಪ್ರಮಾಣದಲ್ಲಿ ಬಂಡವಾಳದ ಹರಿವು ರೂಪಾಯಿ ಮೌಲ್ಯದಲ್ಲಿನ ಏರಿಕೆಗೆ ಕಾರಣ ಎಂದು ವಿದೇಶಿ ವಿನಿಮಯ ದಲ್ಲಾಳಿಗಳು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ವಹಿವಾಟನ್ನು ಪ್ರತಿ ಡಾಲರಿಗೆ 39.35/36ರೂಗಳಿಗೆ ಶುಕ್ರವಾರ ಅಂತ್ಯಗೊಳಿಸಿದ್ದ ರೂಪಾಯಿ ವಿದೇಶಿ ವಿನಿಮಯ ವ್ಯಾಪಾರ ಇಂದು ಪ್ರಾರಂಭಿಕ ಅವಧಿಯಲ್ಲಿ 39.31/3150 ರೂ. ಡಾಲರ್ ಲೆಕ್ಕದಲ್ಲಿ ವಹಿವಾಟು ನಡೆಸಿತು.
ಬಿಎಸ್ಇ ಶೇರು ಸೂಚ್ಯಂಕ ಪ್ರಾರಂಭಿಕ ವಹಿವಾಟಿನಲ್ಲಿ 289 ಅಂಶಗಳ ಭಾರಿ ಏರಿಕೆ ಕಂಡಿದ್ದರಿಂದ ರೂಪಾಯಿ ಮೌಲ್ಯದಲ್ಲಿ ಹೆಚ್ಚಳವಾಗಲು ಕಾರಣ ಎಂದು ವಿದೇಶಿ ವಿನಿಮಯ ದಲ್ಲಾಳಿಗಳು ಮಾರುಕಟ್ಟೆಯನ್ನು ವಿಶ್ಲೇಷಿಸಿದ್ದಾರೆ. ರೂಪಾಯಿ ಮೌಲ್ಯದಲ್ಲಿ ನಿಯಂತ್ರಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಮದ್ಯ ಪ್ರವೇಶಿಸುವ ಸಾಧ್ಯತೆಯನ್ನು ವಿದೇಶಿ ವಹಿವಾಟುದಾರರು ನಿರೀಕ್ಷಿಸಿದ್ದರು.
|