ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ
 
ರೂ. ಮೌಲ್ಯದಲ್ಲಿ ದಾಖಲೆ ಏರಿಕೆ
ಯುಎಸ್ ಫೆಡರಲ್ ಬ್ಯಾಂಕ್ ಠೇವಣಿಗಳ ಮೇಲಿನ ಬಡ್ಡಿದರಗಳಲ್ಲಿ ಪ್ರತಿಶತ 0.25ರಷ್ಟು ಕಡಿತಗೊಳಿಸಿದ ನಂತರ ಭಾರತೀಯ ರೂಪಾಯಿ ಮತ್ತು ಅಮೆಕರಿಕದ ಡಾಲರ್ ನಡುವಿನ ವಿದೇಶಿ ವಿನಿಮಯ ವಹಿವಾಟಿನಲ್ಲಿ ಒಂಬತ್ತೂವರೆ ವರ್ಷಗಳ ಹಿಂದೆ ಕಾಯ್ದುಕೊಂಡಿದ್ದ ಮೌಲ್ಯಕ್ಕೆ ಇಂದು ಬಂದು ತಲುಪಿತು.

ಅತಿಯಾಗಿ ಚುರುಕಾಗಿದ್ದ ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ವ್ಯವಹಾರದಲ್ಲಿ ಪ್ರತಿಡಾಲರಿಗೆ 39.22/24 ರೂನಂತೆ ತನ್ನ ವ್ಯವಹಾರವನ್ನು ಪ್ರಾರಂಭಿಸಿತು. ಪೆಬ್ರುವರಿ 25, 1998 ರಂದು ಪ್ರತಿಡಾಲರಿಗೆ ರೂಪಾಯಿ ಮೌಲ್ಯವು 39.26ಗೆ ದಾಖಲಾಗಿತ್ತು.

ರಪ್ತು ಉದ್ಯಮಿಗಳ ಹಿತಾಸಕ್ತಿಯನ್ನು ರಕ್ಷಿಸುವುದಕ್ಕೆ ರಿಸರ್ವ್ ಬ್ಯಾಂಕ್ ಕ್ರಮ ತೆಗೆದುಕೊಂಡು ತನ್ನ ಅಧೀನದ ರಾಷ್ಟ್ರೀಕೃತ ಬ್ಯಾಂಕುಗಳಿಗೆ ಮಾರುಕಟ್ಟೆಯಲ್ಲಿರುವ ಡಾಲರನ್ನು ಖರೀದಿಸುವುದಕ್ಕೆ ಸೂಚನೆ ನೀಡಿತು. ರಾಷ್ಟ್ರೀಕೃತ ಬ್ಯಾಂಕುಗಳ ಡಾಲರ್ ಖರೀದಿಯು ರೂಪಾಯಿ ಮೌಲ್ಯವನ್ನು ಪ್ರತಿ ಡಾಲರಿಗೆ 39.32/33ರೂಗಳಿಗೆ ಕುಸಿಯುವಂತೆ ಮಾಡಿತು.
ಮತ್ತಷ್ಟು
ರೂ. ಮೌಲ್ಯದಲ್ಲಿ ಕುಸಿತ
ಪ್ರಾರಂಭಿಕ ವಹಿವಾಟು: ರೂಪಾಯಿ ಮೌಲ್ಯದಲ್ಲಿ ಏರಿಕೆ
ರೂಪಾಯಿ ಮೌಲ್ಯದಲ್ಲಿ ಮತ್ತೆ ಏರಿಕೆ
ವಿದೇಶಿ ವಿನಿಮಯ: ರೂ. ಮೌಲ್ಯದಲ್ಲಿ ಚೇತರಿಕೆ
ವಿದೇಶಿ ವಿನಿಮಯ: ರೂ ಮೌಲ್ಯದಲ್ಲಿ ಸ್ಥಿರತೆ
ರೂಪಾಯಿ ಮೌಲ್ಯದಲ್ಲಿ ಏರಿಕೆ