ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ
 
ದಶಕದ ದಾಖಲೆಗೆ ರೂ ಹತ್ತಿರ
ರಪ್ತು ಉದ್ಯಮಿಗಳು ಡಾಲರ್ ಮಾರಾಟ ಪ್ರಕ್ರಿಯೆಗೆ ಆದ್ಯತೆ ನೀಡಿದ ಕಾರಣ, ಇಂದಿನ ವಿದೇಶಿ ವಿನಿಮಯದ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು ಹೆಚ್ಚು ಕಡಿಮೆ ಹತ್ತು ವರ್ಷಗಳ ಹಿಂದಿನ ಮೌಲ್ಯಕ್ಕೆ ಸಮೀಪವಾಗಿದ್ದು, ಪ್ರಾಥಮಿಕ ವಿದೇಶಿ ವಿನಿಮಯ ವ್ಯವಹಾರದಲ್ಲಿ ಪ್ರತಿ ಡಾಲರ್ ಬೆಲೆ 39.18 ರೂ.ಪೈಸೆಗಳಿಗೆ ನಿಗದಿಯಾಯಿತು.

ಪ್ರತಿ ಡಾಲರ್‌ಗೆ 39.25/26 ರೂ.ಪೈನಂತೆ ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ಪ್ರಾರಂಭವಾಗಿತ್ತು. ಈ ಅವಧಿಯಲ್ಲಿ ಅಂತರ್ ಬ್ಯಾಂಕ್ ವ್ಯವಹಾರ ಚುರುಕಾಗಿದ್ದ ಕಾರಣ ಮತ್ತು ರೂಪಾಯಿ ಮೌಲ್ಯದ ಹೆಚ್ಚಳವನ್ನು ರಪ್ತು ಉದ್ಯಮಿಗಳು ನಿರೀಕ್ಷಿಸಿ ಸಂಗ್ರಹವಾಗಿರುವ ಡಾಲರ್‌ ಮಾರಾಟಕ್ಕೆ ಮುಂದಾಗಿದ್ದು ಇಂದಿನ ರೂಪಾಯಿ ಮೌಲ್ಯದಲ್ಲಿನ ಏರಿಕೆಗೆ ಕಾರಣ ಎಂದು ವಿದೇಶಿ ವಿನಿಮಯ ತಜ್ಞರು ಅನಿಸಿಕೆ ವ್ಯಕ್ತ ಪಡಿಸಿದ್ದಾರೆ.

ವಿದೇಶಿ ವಿನಿಮಯ ಮಾರುಕಟ್ಟೆ ಅನಿರೀಕ್ಷಿತವಾಗಿ ಹರಿದು ಬಂದ ಡಾಲರ್‌ನ್ನು ರಿಸರ್ವ್ ಬ್ಯಾಂಕ್ ತನ್ನ ತೆಕ್ಕೆಗೆ ಖರೀದಿಯ ಮೂಲಕ ತೆಗೆದುಕೊಂಡು ರೂಪಾಯಿ ಮೌಲ್ಯದ ಏರಿಕೆಯನ್ನು ನಿಯಂತ್ರಿಸಿತು.

ಶೇರು ಮಾರುಕಟ್ಟೆಯಲ್ಲಿ ಕಳೆಗುಂದಿದ ವಾತಾವರಣ ಇರುವ ಕಾರಣ ಇಡೀ ದಿನ ರೂಪಾಯಿ ತನ್ನ ಪ್ರಾಬಲ್ಯತೆಯನ್ನು ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಮೆರೆಯುವ ಸಾಧ್ಯತೆ ಇದೆ.
ಮತ್ತಷ್ಟು
ರೂ. ಮೌಲ್ಯದಲ್ಲಿ ದಾಖಲೆ ಏರಿಕೆ
ರೂ. ಮೌಲ್ಯದಲ್ಲಿ ಕುಸಿತ
ಪ್ರಾರಂಭಿಕ ವಹಿವಾಟು: ರೂಪಾಯಿ ಮೌಲ್ಯದಲ್ಲಿ ಏರಿಕೆ
ರೂಪಾಯಿ ಮೌಲ್ಯದಲ್ಲಿ ಮತ್ತೆ ಏರಿಕೆ
ವಿದೇಶಿ ವಿನಿಮಯ: ರೂ. ಮೌಲ್ಯದಲ್ಲಿ ಚೇತರಿಕೆ
ವಿದೇಶಿ ವಿನಿಮಯ: ರೂ ಮೌಲ್ಯದಲ್ಲಿ ಸ್ಥಿರತೆ