ಜಾಗತಿಕ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಇತರ ದೇಶಗಳ ಚಲಾವಣೆಯ ಹಣದ ಎದುರು ಡಾಲರ್ ಮೌಲ್ಯ ಕುಸಿತಗೊಂಡಿದ್ದರೆ. ರೂಪಾಯಿ ಮತ್ತು ಡಾಲರ್ ನಡುವಿನ ವಿದೇಶಿ ವಿನಿಮಯ ವಹಿವಾಟಿನಲ್ಲಿ ಡಾಲರ್ ಮೌಲ್ಯ ಏರಿಕೆಯಾಗಿದೆ.
ಪ್ರಾರಂಭಿಕ ಶೇರು ವಹಿವಾಟು ಕುಸಿತಕ್ಕೆ ಒಳಗಾಗಿದೆ. ಪರಿಣಾಮವಾಗಿ ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಿದೆ. ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ಸಾದಾರಣ ರೂಪದಲ್ಲಿ ಪ್ರಾರಂಭಗೊಂಡಿತು. ಪ್ರತಿಡಾಲರಿಗೆ 39.43/45 ರೂ ನಂತೆ ವಹಿವಾಟು ಪ್ರಾರಂಭವಾದ ವಿದೇಶಿ ವಿನಿಮಯ ವ್ಯವಹಾರ ಸಾಗಿದಂತೆ ಡಾಲರ್ ಪ್ರಾಬಲ್ಯತೆ ಸಾಧಿಸಿ ಅಂತಿಮ ಹಂತದ ವಹಿವಾಟಿನಲ್ಲಿ 39.4050/4150 ರೂ. ಪೈಗಳಿಗೆ ತನ್ನ ಮೌಲ್ಯ ನಿಗದಿಪಡಿಸಿತು.
ಶೇರು ಮಾರುಕಟ್ಟೆಯ ವ್ಯವಹಾರದಲ್ಲಿನ ಕುಸಿತ ರೂಪಾಯಿ ಮೌಲ್ಯದಲ್ಲಿನ ಇಳಿಕೆಗೆ ಕಾರಣ ಎಂದು ವಿದೇಶಿ ವಿನಿಮಯ ದಲ್ಲಾಳಿಗಳು ಅನಿಸಿಕೆ ವ್ಯಕ್ತಪಡಿಸಿದ್ದು, ಈ ಮೊದಲು ಬಿಎಸ್ಇ-30 ಸೂಚ್ಯಂಕವು ಪ್ರಾಥಮಿಕ ವಹಿವಾಟಿನ ನಂತರ 219 ಅಂಶಗಳ ಕುಸಿತಕ್ಕೆ ಒಳಗಾಗಿದೆ. ಇಂದಿನ ಶೇರು ವಹಿವಾಟಿನ ಕುಸಿತಕ್ಕೆ ಮ್ಯುಚುವಲ್ ಫಂಡ್ ಕಂಪನಿಗಳು ಶೇರು ಮಾರಾಟಕ್ಕೆ ಆದ್ಯತೆ ನೀಡಿರುವುದು ಕಾರಣ.
|