ಶುಕ್ರವಾರದ ಪ್ರಾರಂಭಿಕ ವಿದೇಶಿ ವಿನಿಮಯ ವಹಿವಾಟಿನಲ್ಲಿ ಆಮದು ಉದ್ಯಮಿಗಳಿಂದ ಡಾಲರ್‌ಗೆ ಬೇಡಿಕೆ ಏರಿಕೆಯಾದ ಪರಿಣಾಮವಾಗಿ ಡಾಲರ್ ಮೌಲ್ಯದಲ್ಲಿ ಏರಿಕೆ ಮತ್ತು ರೂಪಾಯಿ ಮೌಲ್ಯದಲ್ಲಿ ಕುಸಿತ ಕಂಡುಬಂದಿದೆ. ದಿನದ ಮೊದಲ ಅವಧಿಯ ವಹಿವಾಟಿನಲ್ಲಿ ರೂಪಾಯಿ ಮೌಲ್ಯದಲ್ಲಿ ಮೂರು ಪೈಸೆಗಳ ಇಳಿಕೆಯಾಗಿದೆ.
ಶುಕ್ರವಾರದಂದು ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ಸಾಧಾರಣವಾಗಿತ್ತು 39.48/49 ರೂ.ಪೈಸೆಗಳಿಗೆ ತಲಾ ಒಂದು ಡಾಲರ್‍ನಂತೆ ವಿದೇಶಿ ವಿನಿಮಯ ಪ್ರಾರಂಭವಾಗಿ ನಂತರ 39.56/57 ಗಳಿಗೆ ತಲುಪಿತು. ಗುರುವಾರದಂದು ವಿದೇಶಿ ವಿನಿಮಯದಲ್ಲಿ ಡಾಲರ್ ಮೌಲ್ಯವು 39.53/54 ನಿಗದಿಯಾಗಿತ್ತು.
ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆಯಲ್ಲಿ ಭಾರಿ ಪ್ರಮಾಣದ ಏರಿಕೆ ಮತ್ತು ತೈಲ ಕಂಪನಿಗಳಿಂದ ಭಾರಿ ಪ್ರಮಾಣದ ಖರೀದಿ, ಡಾಲರ್ ಮೌಲ್ಯದಲ್ಲಿನ ಏರಿಕೆಗೆ ಕಾರಣ ಎಂದು ಹೇಳಲಾಗಿದೆ. ಏಷಿಯಾದ ತೈಲ ಮಾರುಕಟ್ಟೆಯಲ್ಲಿ ಪ್ರತಿಬ್ಯಾರೆಲ್ ಕಚ್ಚಾ ತೈಲದ ಬೆಲೆ 97 ಡಾಲರಿಗೆ ನಿಗಧಿಯಾಗಿದೆ.
|