ಶೇರು ಮಾರುಕಟ್ಟೆಯಲ್ಲಿ ಕಂಡು ಬಂದ ಚೇತರಿಕೆಯ ಪರಿಣಾಮವಾಗಿ ಡಾಲರ್ ಮತ್ತು ರೂಪಾಯಿ ನಡುವಿನ ವಿದೇಶಿ ವಿನಿಮಯ ವಹಿವಾಟಿನಲ್ಲಿ ರೂಪಾಯಿ ಮೌಲ್ಯದಲ್ಲಿ ಮೂರು ಪೈಸೆಗಳ ಏರಿಕೆಯಾಗಿದೆ.
ಬಂಡವಾಳದ ಹೊರ ಹರಿವಿನಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ರಪ್ತುದಾರರಿಂದ ಡಾಲರ್ ಮಾರಾಟ ಹೆಚ್ಚಾಗಲು ಕಾರಣ ಎನ್ನಲಾಗಿದೆ.
ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ವಹಿವಾಟಿನಲ್ಲಿ ಸ್ಥಳೀಯ ಮುದ್ರಾಂಕವು ಪ್ರತಿ ಡಾಲರ್ ಬೆಲೆಯನ್ನು 39.46/47ರೂ ಗಳಿಗೆ ಖರೀದಿಸಿತು. ಮಂಗಳವಾರ ದಿನದ ಅಂತ್ಯದ ವಹಿವಾಟು 39.54/55ಕ್ಕೆ ಅಂತ್ಯಗೊಂಡಿತ್ತು.
|