ತೈಲ ರಿಫೈನರಿಗಳಿಂದ ಬಂದ ಮಾಸಾಂತ್ಯದ ಡಾಲರ್ ಬೇಡಿಕೆಯಿಂದಾಗಿ ಬೆಳಗ್ಗಿನ ವಹಿವಾಟಿನ ವೇಳೆಗೆ ಅಮೆರಿಕ ಕರೆನ್ಸಿಯೆದುರು ಭಾರತದ ರೂಪಾಯಿ ಬೆಲೆ ದುರ್ಬಲವಾಯಿತು.
ಇಂಟರ್‌ಬ್ಯಾಂಕ್ ವಿದೇಶೀ ವಿನಿಮಯ (ಫಾರೆಕ್ಸ್) ಮಾರುಕಟ್ಟೆಯಲ್ಲಿ ನಿಧಾನಗತಿಯ ವಹಿವಾಟು ಆರಂಭವಾಗಿದ್ದು, ಬುಧವಾರ ಅಂತ್ಯದ ವೇಳೆಗೆ ಡಾಲರೊಂದಕ್ಕೆ 39.4150/4250 ಇದ್ದ ರೂಪಾಯಿ ಬೆಲೆ, ಇಂದು 39.41/43ರಲ್ಲಿ ಆರಂಭವಾಗಿ 39.43/44ಕ್ಕೆ ತಲುಪಿತು.
ತಿಂಗಳಾಂತ್ಯದಲ್ಲಿ ತಮ್ಮ ಆಮದು ಪಾವತಿಗಾಗಿ ಡಾಲರ್ ಖರೀದಿಸುತ್ತಿದ್ದಾರೆ ಎಂದು ವಿದೇಶೀ ವಿನಿಮಯ ಡೀಲರ್‌ಗಳು ಹೇಳಿದ್ದಾರೆ. ಆದರೆ ರೂಪಾಯಿಯು ಈಕ್ವಿಟಿ ಮಾರುಕಟ್ಟೆಯಿಂದ ಬೆಂಬಲ ಪಡೆದುಕೊಂಡಿರುವುದು ಆಶಾದಾಯಕವಾಗಿದೆ.
ಈ ಮಧ್ಯೆ, ಜಾಗತಿಕ ಕಚ್ಚಾ ತೈಲ ಬೆಲೆಯು ಏಷ್ಯಾ ಮಾರುಕಟ್ಟೆಯಲ್ಲಿ ಬ್ಯಾರೆಲ್ ಒಂದಕ್ಕೆ 96 ಡಾಲರ್ ಸುತ್ತಮುತ್ತ ಇದೆ.
|