ಕಚ್ಚಾ ತೈಲ ಬೆಲೆಯಲ್ಲಿನ ಏರಿಕೆ ಮತ್ತು ಶೇರು ಮಾರುಕಟ್ಟೆಯಲ್ಲಿ ಉಂಟಾದ ಕುಸಿತದ ಕಾರಣ ವಿದೇಶಿ ವಿನಿಮಯದಲ್ಲಿ ರೂಪಾಯಿ ಮೌಲ್ಯ ಕುಸಿತ ಅನುಭವಿಸಿದೆ.
39.46/47 ರೂ.ಪೈನಂತೆ ತಲಾ ಒಂದು ಡಾಲರ್ ನಿಗದಿಯಾಗಿದ್ದ ವಿದೇಶಿ ವಿನಿಮಯ ವಹಿವಾಟು ನಂತರ 39.4550/4650ಕ್ಕೆ ತಲುಪಿತು.
ಬ್ಯಾಂಕಿಂಗ್ ವಲಯದಿಂದ ಡಾಲರ್‌ಗೆ ಬಂದ ಅನಿರೀಕ್ಷಿತ ಬೇಡಿಕೆ ಮತ್ತು ಕಚ್ಚಾ ತೈಲದಲ್ಲಿನ ಬೇಡಿಕೆ ರೂಪಾಯಿ ಮೌಲ್ಯದಲ್ಲಿನ ಕುಸಿತಕ್ಕೆ ಕಾರಣವಾಯಿತು.
ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಶೇರು ಮಾರುಕಟ್ಟೆಯಲ್ಲಿನ ಬಂಡವಾಳ ಹಿಂದೆಗೆತದ ಕಾರಣ ಹಣಕಾಸು ಮಾರುಕಟ್ಟೆಯಲ್ಲಿ ರೂಪಾಯಿ ಪ್ರಮಾಣವನ್ನು ಕಡಿತಗೊಳಿಸಿತು.
|