ಶುಕ್ರವಾರದ ವಿದೇಶಿ ವಿನಿಮಯ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು ಡಾಲರ್‌ಗೆ ಹೋಲಿಸಿದಲ್ಲಿ ಕೆಲಕಾಲ ಇಳಿಮುಖ ಪ್ರವೃತ್ತಿಯನ್ನು ಪ್ರಾರಂಭದಲ್ಲಿ ದಾಖಲಿಸಿತು. ಶೇರು ಮಾರುಕಟ್ಟೆಯಲ್ಲಿ ಕೆಲಕಾಲ ಅಮೆರಿಕದ ಡಾಲರ್ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿತು.
ಅಂತರ್ ಬ್ಯಾಂಕ್ (ಪಾರೆಕ್ಸ್) ಬ್ಯಾಂಕಿನಲ್ಲಿ ವಿದೇಶಿ ವಿನಿಮಯ ವಹಿವಾಟು ಕೆಲಕಾಲ ಕಳೆಗುಂದಿತ್ತು ಎಂದು ವರದಿಯಾಗಿದೆ. ಡಾಲರ್‌ದೊಂದಿಗೆ ನಡೆದ ವಿದೇಶಿ ವಿನಿಮಯ ವಹಿವಾಟಿನಲ್ಲಿ ಸ್ಥಳೀಯ ಮುದ್ರಾಂಕವು 39.2950/3050ರ ಪ್ರತಿ ಡಾಲರ್ ಬೆಲೆ ನಿಗದಿಯಾಗಿತ್ತು.
ವಹಿವಾಟು ಸಾಗಿದಂತೆ ಡಾಲರ್ ಮೌಲ್ಯದಲ್ಲಿ ಏರಿಕೆ ಪ್ರವೃತ್ತಿ ಕಂಡು ಬಂದಿತು. ಪ್ರತಿ ಡಾಲರ್ ಬೆಲೆ 39.26/28 ರೂ.ಪೈಗಳಿಗೆ ಅಂತ್ಯಗೊಂಡಿತು.
ವಿದೇಶಿ ವಿನಿಮಯ ದಲ್ಲಾಳಿಗಳ ಪ್ರಕಾರ ಶೇರು ಮಾರುಕಟ್ಟೆಯಲ್ಲಿ ಕಂಡು ಬಂದ ಚೇತರಿಕೆಯ ವಾತಾವರಣವು ಬಂಡವಾಳ ಮಾರುಕಟ್ಟೆಯಲ್ಲಿ ಡಾಲರ್ ಹರಿವು ಹೆಚ್ಚಾಗಲು ಕಾರಣವಾಯಿತು ಎಂದು ವಿಶ್ಲೇಷಿಸಿದ್ದಾರೆ.
|