ಕೆಲ ಬಹುರಾಷ್ಟ್ರೀಯ ಕಂಪನಿಗಳು ಭಾರಿ ಪ್ರಮಾಣದಲ್ಲಿ ಡಾಲರ ಖರೀದಿ, ಮತ್ತು ಹಣಕಾಸು ಮಾರುಕಟ್ಟೆಯಿಂದ ಡಾಲರ ಹೊರಮುಖವಾಗಿ ಹರಿದ ಕಾರಣ ಬೆಳಗಿನ ಶೇರು ವಹಿವಾಟಿನ ನಂತರ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಕುಸಿತ ದಾಖಲಾಗಿದೆ.
ಅಂತರ್ ಬ್ಯಾಂಕ್ ವಿದೇಶಿ ವಿನಿಮಯ ವಹಿವಾಟಿನಲ್ಲಿ ಡಾಲರ್ ಎದುರು ದಿನದ ವಹಿವಾಟನ್ನು ಪ್ರತಿ ಡಾಲರಿಗೆ 39.60/61 ರೂ.ಪೈನಂತೆ ಪ್ರಾರಂಭಿಸಿತು. ನಂತರ ಶೇರು ಮಾರುಕಟ್ಟೆಯಲ್ಲಿನ ಬಂಡವಾಳದ ಹೋರ ಹರಿವು ದಾಖಲಾಗುತ್ತಿದ್ದಂತೆ ಡಾಲರ್ ಮೌಲ್ಯವು 39.60/61 ರೂ ಪೈಗಳಿಗೆ ಸ್ಥಿರಗೊಂಡಿತು.
ಅಮೆರಿಕದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟು ರಪ್ತು ವ್ಯವಹಾರದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎನ್ನುವ ಆತಂಕದ ಕಾರಣ ವಿದೇಶಿ ವಿನಿಮಯ ವಹಿವಾಟಿನಲ್ಲಿ ರೂಪಾಯಿ ಮೌಲ್ಯವು ಇಳಿಮುಖ ಕಂಡಿತು. ಇದಲ್ಲದೇ ಸಂವೇದಿ ಸೂಚ್ಯಂಕದಲ್ಲಿ ಭಾರಿ ನಷ್ಟವು ರೂಪಾಯಿ ಮೌಲ್ಯದ ಮತ್ತಷ್ಟು ಕುಸಿತಕ್ಕೆ ಕಾರಣವಾಯಿತು. ದಿನದ ಪ್ರಾರಂಭಿಕ ಅವಧಿಯ ಶೇರು ವಿನಿಮಯ ಕೇಂದ್ರದ ವಹಿವಾಟಿನ ನಂತರ ಸಂವೇದಿ ಸೂಚ್ಯಂಕವು 700 ಅಂಶಗಳ ನಷ್ಟ ಅನುಭವಿಸಿತ್ತು.
|