ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಬೇಡಿಕೆಗೆ ತಕ್ಕ ಪೂರೈಕೆ ಇಲ್ಲದ ಕಾರಣ ರೂಪಾಯಿ ಮೌಲ್ಯ ಮೊದಲ ಬಾರಿಗೆ ಐದು ತಿಂಗಳ ಹಿಂದೆ ದಾಖಲಾಗಿದ್ದ 40 ರೂಗಳಿಗೆ ವಿದೇಶಿ ವಿನಿಮಯ ವ್ಯವಹಾರ ನಡೆಸಿತು. ಬುಧವಾರದ ವಿದೇಶಿ ವಿನಿಮಯ ವಹಿವಾಟಿನಲ್ಲಿ ರೂಪಾಯಿ ಮೌಲ್ಯದಲ್ಲಿ 21 ಪೈಸೆಗಳಷ್ಟು ಇಳಿಕೆ ಕಂಡು ಬಂದಿದೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಶೇರು ಮಾರುಕಟ್ಟೆಯಿಂದ ಬಂಡವಾಳವನ್ನು ಹಿಂದೆಗೆದುಕೊಳ್ಳುತ್ತಿರುವ ಕಾರಣ, ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ಪೂರೈಕೆ ಅಕ್ಷರಶಃ ಸ್ಥಗಿತಗೊಂಡಿದೆ. ಚುರುಕಾಗಿ ನಡೆದ ವಿದೇಶಿ ವಿನಿಮಯ ವ್ಯವಹಾರದಲ್ಲಿ ತಲಾ ಡಾಲರ್ ಬೆಲೆಯು 40.1150 ರೂ. ಪೈ ದಾಖಲಾಗಿತ್ತು. ದಿನದ ಪ್ರಾರಂಭಿಕ ವ್ಯವಹಾರದಲ್ಲಿ 39.95/97 ರೂ. ಪೈನಂತೆ ಡಾಲರ್ ಬೆಲೆ ನಿಗದಿಯಾಗಿತ್ತು. ಮಂಗಳವಾರದ ವಿದೇಶಿ ವಿನಿಮಯದಲ್ಲಿ ಡಾಲರ್ ಬೆಲೆ 39.90/91 ರೂಗಳಂತೆ ಅಂತ್ಯಗೊಂಡಿತ್ತು.
ಬ್ಯಾಂಕಿಂಗ್ ಮತ್ತು ವಿದೇಶಿ ವಿನಿಮಯ ದಲ್ಲಾಳಿಗಳು ಡಾಲರ್‌ಗೆ ನಿರಂತರವಾಗಿ ಬೇಡಿಕೆ ಸಲ್ಲಿಸಿದ ಕಾರಣ ಶೇರು ಮಾರುಕಟ್ಟ ಒತ್ತಡಕ್ಕೆ ಸಿಲುಕಿ ಇಳಿಕೆ ಮುಖ ವ್ಯವಹಾರ ದಾಖಲಿಸಿತು.
|