ಏಷಿಯಾದ ಶೇರು ವಿನಿಮಯ ಕೇಂದ್ರಗಳಲ್ಲಿನ ಉತ್ತೇಜಕ ವಹಿವಾಟಿನ ಕಾರಣ ಡಾಲರ್ ಎದುರು ರೂಪಾಯಿ ತನ್ನ ಮೌಲ್ಯದಲ್ಲಿ 13 ಪೈಸೆಗಳ ಏರಿಕೆ ಕಂಡುಕೊಂಡಿತು. ಭಾರತೀಯ ವಿದೇಶಿ ವಿನಿಮಯದ ಸಂಗ್ರಹದಲ್ಲಿ ಡಾಲರ್ ಕೊರತೆ ಇರುವುದರಿಂದ ದಿನದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಕುಸಿಯುವ ಸಾಧ್ಯತೆ ಇದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ತೈಲ ಬೆಲೆ ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು. ಪ್ರತಿ ಬ್ಯಾರಲ್ ಬೆಲೆ 101.32 ಡಾಲರ್ ನಿಗದಿಯಾಗಿದೆ.
ಬುಧವಾರ ಭಾರಿ ಕುಸಿತ ಅನುಭವಿಸಿದ್ದ ಮುಂಬೈ ಶೇರು ವಿನಿಮಯ ಕೇಂದ್ರವು ಗುರುವಾರದ ಪ್ರಾಥಮಿಕ ವಹಿವಾಟಿನಲ್ಲಿ 252 ಅಂಶಗಳ ದಿಡೀರ್ ಚೇತರಿಕೆಯೊಂದಿಗೆ ವಹಿವಾಟು ಪ್ರಾರಂಭಿಸಿದ್ದು ದಿನದ ವಹಿವಾಟಿನಲ್ಲಿ ಚೇತರಿಕೆಯ ಶೇರು ವಹಿವಾಟು ನಡೆಸಲಿದೆ ಎಂದು ದಲ್ಲಾಳಿಗಳು ಅನಿಸಿಕೆ ವ್ಯಕ್ತಪಡಿಸಿದ್ದಾರೆ.
ಪ್ರತಿ ಡಾಲರ್‌ಗೆ ಬೆಲೆಯನ್ನು ರೂ 40.19/20 ಗಳಂತೆ ಅಂತ್ಯಗೊಂಡ ವಿದೇಶಿ ವಿನಿಮಯ ವ್ಯವಹಾರವು ಪ್ರಾರಂಭಿಕ ಹಂತದಲ್ಲಿ 40.20/21 ರೂಗಳಂತೆ ಡಾಲರ್ ಖರೀಧಿ ಬೆಲೆ ನಿಗದಿಯಾಗಿತ್ತು. ಮದ್ಯಂತರದ ಅವಧಿಯಲ್ಲಿ ವಿದೇಶಿ ವಿನಿಮಯ 40.06/07ಗೆ ತಲುಪಿತು.
ಇಂದಿನ ವಿದೇಶಿ ವಿನಿಮಯ ವಹಿವಾಟಿನಲ್ಲಿ ಬ್ಯಾಂಕಿಂಗ್ ವಲಯದಿಂದ ಡಾಲರ್‌ಗೆ ಬೇಡಿಕೆ ವ್ಯಕ್ತವಾಗದ ಕಾರಣ ರೂಪಾಯಿ ಮೌಲ್ಯ ಚೇತರಿಸಿಕೊಳ್ಳಲು ಕಾರಣವಾಯಿತು ಎಂದು ವಿದೇಶಿ ವಿನಿಮಯ ದಲ್ಲಾಳಿಗಳು ಹೇಳಿದ್ದಾರೆ.
|