ಶೇರು ಮಾರುಕಟ್ಟೆಯಲ್ಲಿ ಡಾಲರ್ ಹರಿವು ಹೆಚ್ಚಳವಾದ ಕಾರಣ ವಿದೇಶಿ ವಿನಿಮಯದಲ್ಲಿ ರೂಪಾಯಿ ಮೌಲ್ಯವು 16 ಪೈಸೆಗಳಷ್ಟು ಹೆಚ್ಚಳಗೊಂಡಿದೆ. ಭಾರಿ ಪ್ರಮಾಣದಲ್ಲಿ ಡಾಲರ್ ಮಾರಾಟ ಮಾಡಿದ ಕಾರಣ ಮತ್ತು ಬಂಡವಾಳ ರೂಪದಲ್ಲಿ ಡಾಲರ್ ಶೇರು ಮಾರುಕಟ್ಟೆಯನ್ನು ಪ್ರವೇಶಿಸಿದ್ದರಿಂದ ಡಾಲರ್ ಪೂರೈಕೆಯಲ್ಲಿ ದಿಡೀರ್ ಏರಿಕೆ ದಾಖಲಾಗಿದೆ.
ದಿನದ ಪ್ರಾರಂಭದಲ್ಲಿ ಪ್ರತಿ ಡಾಲರಿಗೆ 39.80/82ರಿಂದ ವಹಿವಾಟು ಪ್ರಾರಂಭವಾದ ವಿದೇಶಿ ವಿನಿಮಯ ವಹಿವಾಟು ಪ್ರಾರಂಭಿಕ ವಹಿವಾಟಿನ ನಂತರ 39,74/75ಕ್ಕೆ ತಲುಪಿ 39.90/91 ರೂಗಳಿಗೆ ಡಾಲರ್ ಖರೀದಿ ಮಾಡಿ ವ್ಯವಹಾರ ಅಂತ್ಯಗೊಳಿಸಿತು.
ಕಳೆದ ಒಂದು ತಿಂಗಳಿನಿಂದ ವಿದೇಶಿ ವಿನಿಮಯ ವ್ಯವಹಾರದಲ್ಲಿ ಕಂಡು ಬಂದ ಡಾಲರ್ ಕೊರತೆಯನ್ನು ನಿಗಿಸುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಸಾಕಷ್ಟು ಪ್ರಮಾಣದ ವಿದೇಶಿ ವಿನಿಮಯದ ನಿಧಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ವಿದೇಶಿ ವಿನಿಮಯ ವ್ಯವಹಾರದಲ್ಲಿ ಪರಿವರ್ತಿಸಬಹುದಾದ ವಿದೇಶಿ ವಿನಿಮಯ ಸಂಗ್ರಹವನ್ನು ಆರ್‌ಬಿಐ ಹೆಚ್ಚಿಸಿತ್ತು.
|