ಮುಖ್ಯ ಪುಟ  ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಾಲರ್ ವಿರುದ್ಧ ಕುಸಿತ ಕಂಡ ರೂಪಾಯಿ
ಏಷ್ಯನ್ ಷೇರು ಮಾರುಕಟ್ಟೆಗಳಲ್ಲಿ ಕಂಡುಬಂದ ದುರ್ಬಲತೆಯು, ಭಾರತದ ರೂಪಾಯಿ ಮೇಲೆ ಒತ್ತಡವನ್ನು ಉಂಟು ಮಾಡಿದೆ. ಆರಂಭಿಕ ವಹಿವಾಟಿನಲ್ಲಿ ಅದು ಡಾಲರ್ ವಿರುದ್ಧ 2 ಪೈಸೆಯಷ್ಟು ಇಳಿಕೆಯನ್ನು ಕಂಡು, ರೂ. 40.1650/1750 ನಲ್ಲಿ ವಹಿವಾಟು ನಡೆಸುತ್ತಿತ್ತು.

ಅಂತರ ಬ್ಯಾಂಕ್ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಲ್ಪ ಕುಸಿತದ ವಹಿವಾಟು ಕಂಡು ಬಂದಿತು. ನಿನ್ನೆ 40.1450/1750 ಕೊನೆಗೊಂಡಿದ್ದ ರುಪಾಯಿ, ಇಂದು ಬೆಳಿಗ್ಗೆ ಒಂದು ಡಾಲರ್‌ಗೆ 40.17/18 ರೂ. ಆಗಿತ್ತು, ಆ ನಂತರ ಅದು ರೂ.40.16/17 ಸ್ಥಿರಗೊಂಡಿತ್ತು.

ಭಾರತೀಯ ಷೇರು ಮಾರುಕಟ್ಟೆಯಲ್ಲಿ ಕಂಡು ಬಂದಿರುವ ಕುಸಿತ, ರೂಪಾಯಿ ಬೆಲೆಯನ್ನು ಕೆಳಕ್ಕೆ ತಳ್ಳಲು ಮುಖ್ಯ ಕಾರಣವಾಗಿದೆ. ಇಂದು ಬೆಳಿಗ್ಗೆ 10.30ಕ್ಕೆ ಸೂಚ್ಯಂಕದಲ್ಲಿ 82 ಅಂಶಗಳ ಇಳಕೆ ಕಂಡು ಬಂದಿತ್ತು. ವಾಲ್‌ಸ್ಟ್ರೀಟ್‌ನಲ್ಲಿ ಕಂಡು ಬಂದ ಕುಸಿತ ಏಷ್ಯನ್ ಮಾರುಕಟ್ಟೆಗಳ ಮೇಲೂ ಸಹ ಪರಿಣಾಮ ಉಂಟು ಮಾಡಿ ಕುಸಿತ ಕಾಣುವಂತೆ ಮಾಡಿತ್ತು.

ಮಾಸಾಂತ್ಯದಲ್ಲಿ ಡಾಲರ್‌ಗೆ ಬೇಡಿಕೆ ಉಂಟಾಗಲು ಮುಖ್ಯ ಕಾರಣ, ತೈಲ ಸಂಸ್ಕರಣಾ ಘಟಕಗಳಿಂದ ಉಂಟಾದ ಖರೀದಿ. ಇದು ಸಹ ರೂಪಾಯಿ ಕುಸಿತಕ್ಕೆ ಕಾರಣವಾಗಿತ್ತು.

ಆದರೆ ಸತತ ನಾಲ್ಕು ದಿನಗಳಿಂದ ನಡೆದ ವಹಿವಾಟಿನಲ್ಲಿ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಡೆಸಿದ ಖರೀದಿಯಿಂದಾಗಿ, ರೂಪಾಯಿ ಉತ್ತಮ ಮಟ್ಟ ಕಾಯ್ದುಕೊಳ್ಳುವ ಲಕ್ಷಣಗಳಿವೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ಇದೇ ಅವಧಿಯಲ್ಲಿ ಜಾಗತಿಕ ಕಚ್ಚಾ ತೈಲದ ಬೆಲೆ 105 ಡಾಲರ್‌ಗೆ ಹೆಚ್ಚಳಗೊಂಡಿದೆ. ಮೇ ತಿಂಗಳ ಪೂರೈಕೆಗಾಗಿ ನಡೆದ ಲೈಟ್ ಸ್ವೀಟ್ ಕಚ್ಚಾ ತೈಲದ ಬೆಲೆಯು 4.01 ಡಾಲರ್ ಹೆಚ್ಚಿ, ಒಂದು ಬ್ಯಾರೆಲ್‌ಗೆ 105.23 ಡಾಲರ್ ಆಗಿತ್ತು.
ಮತ್ತಷ್ಟು
ವಿದೇಶಿ ವಿನಿಮಯ: ರೂಪಾಯಿ ಮೌಲ್ಯದಲ್ಲಿ ಏರಿಕೆ
ರೂಪಾಯಿ ಮೌಲ್ಯದಲ್ಲಿ ಅಲ್ಪ ಚೇತರಿಕೆ
ರೂಪಾಯಿ ಮೌಲ್ಯದಲ್ಲಿ ಮತ್ತೆ ಇಳಿಕೆ
ವಿದೇಶಿ ವಿನಿಮಯ: ರೂ. ಮೌಲ್ಯದಲ್ಲಿ ಕುಸಿತ
ಇಳಿ ಮುಖಗೊಂಡ ರೂಪಾಯಿ ಮೌಲ್ಯ
ರೂಪಾಯಿ ಮೌಲ್ಯದಲ್ಲಿ ಎರಿಕೆ