ಮಾಸಾಂತ್ಯದಲ್ಲಿ ಡಾಲರ್ ಬೇಡಿಕೆ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗಿನ ವೇಳೆ ರೂಪಾಯಿ ದರವು 21 ಪೈಸೆಯಷ್ಟು ಕುಸಿದು, ಡಾಲರ್‌ಗೆ 46.42/43 ರೂ.ಗೆ ತಲುಪಿತು.
ಇಂಟರ್-ಬ್ಯಾಂಕ್ ವಿದೇಶೀ ವಿನಿಮಯ (ಫಾರೆಕ್ಸ್) ಮಾರುಕಟ್ಟೆಯಲ್ಲಿ ವಹಿವಾಟು ಮಂದಗತಿಯಲ್ಲಿ ನಡೆದಿದ್ದು, ಸ್ಥಳೀಯ ಕರೆನ್ಸಿಯು ಕಳೆದ ರಾತ್ರಿಯ ಮುಕ್ತಾಯವಾದ 46.21/22 ಮೌಲ್ಯದಿಂದ ಪ್ರತಿ ಡಾಲರ್‌ಗೆ 46.19/21 ತಲುಪಿತು. ಆದರೆ ಬಳಿಕ ಮತ್ತೆ ಕುಸಿದು 46.42/43 ಮಟ್ಟಕ್ಕೆ ಬಂತು.
ತಮ್ಮ ಮಾಸಾಂತ್ಯದ ಆಮದು ಚಟುವಟಿಕೆಗಳಿಗಾಗಿ ತೈಲ ರಿಫೈನರಿಗಳು ಡಾಲರ್ ಖರೀದಿ ಹೆಚ್ಚಿಸಿದ್ದರಿಂದ, ರೂಪಾಯಿಯು ಒತ್ತಡದಲ್ಲಿ ಸಿಲುಕಿತು ಎಂದು ಫಾರೆಕ್ಸ್ ಡೀಲರ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಈ ನಡುವೆ, ಏಷ್ಯಾ ಮಾರುಕಟ್ಟೆಯಲ್ಲಿ ಜಾಗತಿಕ ಕಚ್ಚಾ ತೈಲವು ಬ್ಯಾರೆಲ್ ಒಂದರ 107 ಡಾಲರ್ ದರದಲ್ಲಿ ವಿಕ್ರಯವಾಗುತ್ತಿತ್ತು.
ಏಷ್ಯಾದ ಈಕ್ವಿಟಿ ಮಾರುಕಟ್ಟೆಯಲ್ಲಾಗಿರುವ ತೀವ್ರ ಕುಸಿತವೂ ರೂಪಾಯಿಯ ಕ್ಷಮತೆ ಮೇಲೆ ಪರಿಣಾಮ ಬೀರಿತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
|