ಗುರುವಾರದಂದು ವಿದೇಶಿ ಬಂಡವಾಳ ಹೂಡಿಕೆಯ ಹೊರಹರಿವು ಹೆಚ್ಚಳವಾದ ಹಿನ್ನಲೆಯಲ್ಲಿ ಏಷ್ಯಾ ಶೇರುಪೇಟೆ ಕುಸಿತಗೊಂಡು ಡಾಲರ್ ಎದುರು ರೂಪಾಯಿ 50.50ಕ್ಕೆ ತಲುಪಿದ್ದು, ಇಂದಿನ ವಹಿವಾಟಿನಲ್ಲಿ ಡಾಲರ್ ಎದುರು 30 ಪೈಸೆ ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.
ಹಿಂದಿನ ದಿನದ ವಹಿವಾಟಿನಲ್ಲಿ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ 48 ಪೈಸೆ ಕುಸಿತ ಕಂಡಿತ್ತು. ಅಮುದು ವಹಿವಾಟುದಾರರಿಂದ ಡಾಲರ್ ಖರೀದಿಯಲ್ಲಿ ಹೆಚ್ಚಳವಾಗಿದ್ದರಿಂದ ಇಂದು ಡಾಲರ್ ಎದುರಿಗೆ ರೂಪಾಯಿ ಮೌಲ್ಯ 30 ಪೈಸೆ ಕುಸಿದಿದೆ ಎಂದು ಮಾರುಕಟ್ಟೆಯ ಅಧಿಕಾರಿಗಳು ತಿಳಿಸಿದ್ದಾರೆ.
ಶೇರುಪೇಟೆಗಳ ಕುಸಿತದಿಂದಾಗಿ ವಿದೇಶಿ ಬಂಡವಾಳ ಹೂಡಿಕೆದಾರರು ಹೂಡಿಕೆಯನ್ನು ಹಿಂದಕ್ಕೆ ಪಡೆಯುತ್ತಿರುವುದರಿಂದ ರೂಪಾಯಿ ಮೌಲ್ಯದ ಮೇಲೆ ಭಾರಿ ಪ್ರಭಾವ ಬೀರಿದೆ ಎಂದು ಫಾರೆಕ್ಸ್ ಟೀಲರ್‌ಗಳು ತಿಳಿಸಿದ್ದಾರೆ. |