ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ > ಡಾಲರ್ ಎದುರು ರೂಪಾಯಿ ಸ್ಥಿರ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಾಲರ್ ಎದುರು ರೂಪಾಯಿ ಸ್ಥಿರ
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಅಡ್ಡಾ ದಿಡ್ಡಿಯಾಗಿ ಚಲಿಸುತ್ತಿದ್ದ ರೂಪಾಯಿ ಮೌಲ್ಯ, ಡಾಲರ್‌ಗಳ ಖರೀದಿ ಹಾಗೂ ಮಾರಾಟ ಮತ್ತು ಸ್ಥಳೀಯ ಶೇರುಗಳ ವಹಿವಾಟು ಉತ್ತಮಗೊಂಡ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಸ್ಥಿರವಾಗಿದೆ ಎಂದು ಮೂಲಗಳು ತಿಳಿಸಿವೆ

ಫೋರೆಕ್ಸ್ ಮಾರುಕಟ್ಟೆಯಲ್ಲಿ ಹಿಂದಿನ ದಿನದ ವಹಿವಾಟಿನಲ್ಲಿ ಪ್ರತಿ ಡಾಲರ್‌ಗೆ ರೂಪಾಯಿ ಮೌಲ್ಯ 50.02/03 ಗೆ ತಲುಪಿತ್ತು. ಇಂದಿನ ವಹಿವಾಟಿನ ಆರಂಭದಲ್ಲಿ 50.01/02 ರೂಪಾಯಿಗಳಿಗೆ ತಲುಪಿದೆ ಎಂದು ಮೂಲಗಳು ತಿಳಿಸಿವೆ.

ತೈಲ ಉತ್ಪಾದಕರಿಂದ ಡಾಲರ್‌ ಬೇಡಿಕೆಯಲ್ಲಿ ಏರಿಕೆ ಹಾಗೂ ಸತತ ಬಂಡವಾಳದ ಹೊರಹರಿವಿನಲ್ಲಿ ಹೆಚ್ಚಳವಾಗಿದ್ದರಿಂದ ರೂಪಾಯಿ ಒತ್ತಡಕ್ಕೆ ಸಿಲುಕಿದೆ ಎಂದು ಫೋರೆಕ್ಸ್ ಡೀಲರ್‌ಗಳು ಅಭಿಪ್ರಾಯಪಟ್ಟಿದ್ದಾರೆ.

ಸ್ಥಳೀಯ ಶೇರುಗಳ ವಹಿವಾಟು ಚುರುಕುಗೊಂಡಿದ್ದರಿಂದ, ಇಳಿಕೆಯಾಗಿದ್ದ ರೂಪಾಯಿ ಮೌಲ್ಯ ಮತ್ತೆ ಸುಸ್ಥಿತಿಗೆ ಬಂದು ಸ್ಥಿರತೆ ಕಂಡುಕೊಂಡಿದೆ ಎಂದು ಡೀಲರ್‌ಗಳು ತಿಳಿಸಿದ್ದಾರೆ.

ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಿದೇಶಿ ಸಂಸ್ಥೆಗಳ ಹೂಡಿಕೆದಾರರು, ಭಾರತೀಯ ಕಂಪೆನಿಗಳಿಂದ ಬಂಡವಾಳವನ್ನು ಹಿಂತೆಗೆದುಕೊಂಡಿರುವುದು ರೂಪಾಯಿ ಮೌಲ್ಯ ಕುಸಿತಕ್ಕೆ ಕಾರಣವಾಗಿದೆ ಎಂದು ಡೀಲರ್‌ಗಳು ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಡಾಲರ್ ಎದುರು ರೂಪಾಯಿ ಮೌಲ್ಯ 21 ಪೈಸೆ ಕುಸಿತ
ವಿದೇಶಿ ವಿನಿಮಯ: ಸ್ಥಿರಗೊಂಡ ರೂಪಾಯಿ ಮೌಲ್ಯ
ಡಾಲರ್ ವಿರುದ್ಧ ಕುಸಿತ ಕಂಡ ರೂಪಾಯಿ
ವಿದೇಶಿ ವಿನಿಮಯ: ರೂಪಾಯಿ ಮೌಲ್ಯದಲ್ಲಿ ಏರಿಕೆ
ರೂಪಾಯಿ ಮೌಲ್ಯದಲ್ಲಿ ಅಲ್ಪ ಚೇತರಿಕೆ