ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ > ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ
PTI
ಶೇರುಪೇಟೆಗಳ ಏರಿಕೆ ,ರಫ್ತು ವಹಿವಾಟುದಾರರಿಂದ ಡಾಲರ್‌ಗಳ ಮಾರಾಟದಲ್ಲಿ ಹೆಚ್ಚಳವಾದ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 28 ಪೈಸೆ ಏರಿಕೆ ಕಂಡಿದೆ ಎಂದು ಮೂಲಗಳು ತಿಳಿಸಿವೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ದೇಶಿಯ ಕರೆನ್ಸಿ ರೂಪಾಯಿ, ಪ್ರತಿ ಡಾಲರ್‌ಗೆ 49.87/88ಗೆ ತಲುಪಿ ಹಿಂದಿನ ವಹಿವಾಟಿಗಿಂತ 28 ಪೈಸೆ ಹೆಚ್ಚಳ ಕಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಜಾಗತಿಕ ಶೇರುಪೇಟೆಗಳು ಏರಿಕೆಯೊಂದಿಗೆ ಆರಂಭವಾದ ಹಿನ್ನೆಲೆಯಲ್ಲಿ ದೇಶಿಯ ಶೇರುಗಳು ಕೂಡಾ ಏರಿಕೆ ಕಾಣಬಹುದು ಎನ್ನುವ ನಿರೀಕ್ಷೆಯಲ್ಲಿ ಬ್ಯಾಂಕ್‌ಗಳು ಹಾಗೂ ರಫ್ತುವಹಿವಾಟುದಾರರು ಡಾಲರ್‌ಗಳ ಮಾರಾಟದಲ್ಲಿ ತೊಡಗಿದ್ದರಿಂದ ರೂಪಾಯಿ ಮೌಲ್ಯ ಏರಿಕೆಗೆ ಸಹಾಯಕವಾಗಿದೆ ಎಂದು ಮಾರುಕಟ್ಟೆಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಯುರೋ ಎದುರು ಡಾಲರ್ ಕುಸಿತ ಹಾಗೂ ಏಷ್ಯಾ ದೇಶಗಳ ಕರೆನ್ಸಿಗಳ ಬೆಂಬಲದಿಂದಾಗಿ ರೂಪಾಯಿ ವಹಿವಾಟಿನ ಮೇಲೆ ಸಕರಾತ್ಮಕ ಪರಿಣಾಮಗಳು ಬೀರಿವೆ ಎಂದು ತಿಳಿಸಿದ್ದಾರೆ.

ಅಟೋಮೊಬೈಲ್ ಕಂಪೆನಿಗಳಿಗೆ ಅಮೆರಿಕ ಪರಿಹಾರದ ಪ್ಯಾಕೇಜ್‌ ನೀಡಲಿದೆ ಎನ್ನುವ ನಿರೀಕ್ಷೆಯಲ್ಲಿ ಏಷ್ಯಾ ಮಾರುಕಟ್ಟೆಗಳು ಬುಧವಾರದ ವಹಿವಾಟಿನಲ್ಲಿ ಏರಿಕೆಯನ್ನು ಕಂಡಿವೆ ಎಂದು ಹೂಡಿಕೆದಾರರು ಅಭಿಪ್ರಾಯಪಟ್ಟಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಡಾಲರ್ ಎದುರು ರೂಪಾಯಿ ಸ್ಥಿರ
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಡಾಲರ್ ಎದುರು ರೂಪಾಯಿ ಮೌಲ್ಯ 21 ಪೈಸೆ ಕುಸಿತ
ವಿದೇಶಿ ವಿನಿಮಯ: ಸ್ಥಿರಗೊಂಡ ರೂಪಾಯಿ ಮೌಲ್ಯ
ಡಾಲರ್ ವಿರುದ್ಧ ಕುಸಿತ ಕಂಡ ರೂಪಾಯಿ
ವಿದೇಶಿ ವಿನಿಮಯ: ರೂಪಾಯಿ ಮೌಲ್ಯದಲ್ಲಿ ಏರಿಕೆ