ಕೇಂದ್ರ ಸರಕಾರದ ಪ್ಯಾಕೇಜ್ ಘೋಷಣೆಯಿಂದಾಗಿ ಮಾರುಕಟ್ಟೆಯಲ್ಲಿ ಹಣದ ಒಳ ಹರಿವಿನಲ್ಲಿ ಏರಿಕೆಯಾಗಿದೆ. ಬ್ಯಾಂಕ್‌ಗಳು ಡಾಲರ್‌ಗಳ ಮಾರಾಟದಲ್ಲಿ ತೊಡಗಿದ್ದರಿಂದ, ರೂಪಾಯಿ ಮೌಲ್ಯ ಡಾಲರ್ ಎದುರಿಗೆ 35 ಪೈಸೆ ಏರಿಕೆ ಕಂಡಿದೆ. ವಿದೇಶಿ ವಿನಿಮಯ ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ದೇಶಿಯ ಕರೆನ್ಸಿ ಡಾಲರ್ ಎದುರಿಗೆ 35 ಪೈಸೆ ಏರಿಕೆಯಾಗಿ 49.22ರೂಪಾಯಿಗಳಿಗೆ ತಲುಪಿದೆ. ಹಿಂದಿನ ದಿನದ ವಹಿವಾಟಿನಲ್ಲಿ 49.56/57 ರೂ.ಗಳಿಗೆ ತಲುಪಿತ್ತು.ಜಾಗತಿಕ ಮಾರುಕಟ್ಟೆಗಳು ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ದೇಶಿಯ ಶೇರುಗಳು ಕೂಡಾ ಏರಿಕೆಯಾಗುವ ನಿರೀಕ್ಷೆಯಿದೆ. ರಫ್ತುದಾರರು ಮತ್ತು ಬ್ಯಾಂಕ್‌ಗಳು ಡಾಲರ್ ಮಾರಾಟದಲ್ಲಿ ತೊಡಗಿದ್ದರಿಂದ, ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಏರಿಕೆಯಾಗಿದೆ ಎಂದು ಡೀಲರ್‌ಗಳು ಅಭಿಪ್ರಾಯಪಟ್ಟಿದ್ದಾರೆ.ಜಪಾನ್‌ನ ನಿಕೈ ಶೇ.4.62 ಮತ್ತು ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಶೇರುಪೇಟೆ ಶೇ.5.95ರಷ್ಟು ಶೇರುಪೇಟೆ ಶೇರುದಂತೆ ಏಷ್ಯಾದ ಶೇರುಪೇಟೆಗಳು ಆರಂಭಿಕ ವಹಿವಾಟಿನಲ್ಲಿ ಏರಿಕೆ ಕಂಡಿವೆ. ತೈಲ ದರಗಳ ನಿರಂತರ ಕುಸಿತದಿಂದಾಗಿ ಬ್ಯಾಂಕ್‌ಗಳು ಡಾಲರ್ ಮಾರಟದಲ್ಲಿ ತೊಡಗಿದ್ದರಿಂದ ಹಿಂದಿನ ದಿನದ ವಹಿವಾಟಿನಲ್ಲಿ ದೇಶಿಯ ಕರೆನ್ಸಿ ಡಾಲರ್ ಎದುರಿಗೆ 30 ಪೈಸೆ ಹೆಚ್ಚಳವಾಗಿ ಮುಕ್ತಾಯಗೊಂಡಿತ್ತು. |