ಏಷ್ಯಾ ಶೇರುಪೇಟೆಗಳು ಏರಿಕೆಯಾಗುತ್ತಿರುವ ಮಧ್ಯೆ ಬ್ಯಾಂಕ್‌ಗಳು ಡಾಲರ್‌ಗಳ ಮಾರಾಟದಲ್ಲಿ ತೊಡಗಿದ್ದರಿಂದ ಡಾಲರ್ ಎದುರಿಗೆ ದೇಶಿಯ ಕರೆನ್ಸಿ ರೂಪಾಯಿ ಮೌಲ್ಯ 48 ಪೈಸೆ ಏರಿಕೆಯಾಗಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ದೇಶಿಯ ಕರೆನ್ಸಿ ರೂಪಾಯಿ 49.11ರೂಪಾಯಿಗಳಿಗೆ ತಲುಪಿದ್ದು,ಹಿಂದಿನ ದಿನದ ವಹಿವಾಟಿಗೆ ಹೋಲಿಸಿದಲ್ಲಿ 48ಪೈಸೆ ಹೆಚ್ಚಳವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಏಷ್ಯಾದ ಶೇರುಪೇಟೆಗಳ ವಹಿವಾಟಿನಲ್ಲಿ ಏರಿಕೆ ಕಂಡಿದ್ದರಿಂದ ದೇಶಿಯ ಶೇರುಪೇಟೆ ಕೂಡಾ ಚೇತರಿಕೆಯ ನಿರೀಕ್ಷೆಯಲ್ಲಿದ್ದು, ರಫ್ತು ಸಂಸ್ಥೆಗಳು ಹಾಗೂ ಬ್ಯಾಂಕ್‌ಗಳು ಡಾಲರ್‌ಗಳ ಮಾರಾಟದಲ್ಲಿ ತೊಡಗಿದ್ದರಿಂದ ದೇಶಿಯ ಕರೆನ್ಸಿ ಮೌಲ್ಯ ರೂಪಾಯಿ ಏರಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ
ಏಷ್ಯಾ ಮಾರುಕಟ್ಟೆಯಲ್ಲಿ ಜಪಾನ್‌ನ ನಿಕೈ ಶೇ.2.34 ಮತ್ತು ಹಾಂಗ್‌ಕಾಂಗ್‌ನ ಹಾಂಗ್‌ಸೆಂಗ್ ಶೇರುಪೇಟೆ ಕೂಡಾ ಶೇ.2.76 ರಷ್ಟು ಏರಿಕೆಯನ್ನು ಕಂಡಿವೆ. |