ಅಮುದು ವಹಿವಾಟುದಾರರಿಂದ ಡಾಲರ್ ಬೇಡಿಕೆಯಲ್ಲಿ ಹೆಚ್ಚಳ ಹಾಗೂ ದೇಶಿಯ ಶೇರುಪೇಟೆ ಕುಸಿತದಿಂದಾಗಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 32 ಪೈಸೆ ಇಳಿಕೆಯಾಗಿದೆ.
ಹಿಂದಿನ ದಿನದ ವಹಿವಾಟಿನ ಅಂತ್ಯಕ್ಕೆ ಪ್ರತಿ ಡಾಲರ್‌ಗೆ 48.33/34ರೂಪಾಯಿಗಳಾಗಿದ್ದು,ಶುಕ್ರವಾರದ ಆರಂಭಿಕ ವಹಿವಾಟಿನಲ್ಲಿ 32 ಪೈಸೆ ಕುಸಿತವಾಗಿ 48.65ರೂ.ಗಳಿಗೆ ತಲುಪಿದೆ ಎಂದು ವಿದೇಶಿ ವಿನಿಮಯ ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ವಿದೇಶಿ ಬಂಡವಾಳದ ಹೊರಹರಿವು ಹಾಗೂ ಅಮುದು ವಹಿವಾಟಿದಾರರಿಂದ ಹೆಚ್ಚಿದ ಡಾಲರ್ ಬೇಡಿಕೆ ಮತ್ತು ಏಷ್ಯಾ ಶೇರುಪೇಟೆಗಳ ಕುಸಿತದಿಂದಾಗಿ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಇಳಿಕೆಯಾಗಿದೆ ಎಂದು ಡೀಲರ್‌ಗಳು ತಿಳಿಸಿದ್ದಾರೆ.
ಏಷ್ಯಾ ಶೇರುಪೇಟೆಗಳು ಕುಸಿತದೊಂದಿಗೆ ವಹಿವಾಟು ಆರಂಭಿಸಿದ್ದು, ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.6.20, ಜಪಾನ್‌ನ ನಿಕೈ ಶೇರುಪೇಟೆಗಳು ಶೇ.4.12 ರಷ್ಟು ಕುಸಿತಗೊಂಡಿವೆ ಎಂದು ಫಾರೆಕ್ಸ್ ಮೂಲಗಳು ತಿಳಿಸಿವೆ. |