ವಿದೇಶಿ ಬಂಡವಾಳದ ಒಳಹರಿವು ಹೆಚ್ಚಳ ಮತ್ತು ರಫ್ತು ವಹಿವಾಟುದಾರರಿಂದ ಡಾಲರ್‌ಗಳ ಮಾರಾಟದಲ್ಲಿ ಹಿನ್ನೆಲೆಯಲ್ಲಿ ಡಾಲರ್ ಇತರ ಕರೆನ್ಸಿಗಳ ಮುಂದೆ ದುರ್ಬಲಗೊಂಡಿದ್ದು, ಡಾಲರ್ ಎದುರಿಗೆ ರೂಪಾಯಿ ಮೌಲ್ಯ 61 ಪೈಸೆ ಏರಿಕೆಯಾಗಿದೆ. ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಡಾಲರ್‌ಗೆ 47.30 ರೂಪಾಯಿಗಳಿಗೆ ತಲುಪಿತ್ತು.ಬುಧವಾರದ ಆರಂಭಿಕ ವಹಿವಾಟಿನಲ್ಲಿ ಮತ್ತೆ 61ಪೈಸೆ ಏರಿಕೆಯಾಗಿ 47.91/92ರೂ.ಗಳಿಗೆ ತಲುಪಿದೆ.ಏಷ್ಯಾ ಶೇರುಪೇಟೆಗಳಲ್ಲಿ ಶೇರುಸೂಚ್ಯಂಕ ಏರಿಕೆ ಕಾಣುತ್ತಿರುವುದರಿಂದ ದೇಶಿಯ ಶೇರುಪೇಟೆ ಕೂಡಾ ಏರಿಕೆಯಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಬ್ಯಾಂಕ್‌ಗಳು ಹಾಗೂ ರಫ್ತು ವಹಿವಾಟುದಾರರು ಡಾಲರ್‌ಗಳ ಮಾರಾಟದಲ್ಲಿ ತೊಡಗಿದ್ದರಿಂದ ರೂಪಾಯಿ ಮೌಲ್ಯ ಏರಿಕೆಗೆ ಕಾರಣವಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ. ಏಷ್ಯಾ ಮಾರುಕಟ್ಟೆಯಲ್ಲಿ ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.2.7 ರಷ್ಟು ಏರಿಕೆ ಕಂಡಿದ್ದು, ಜಪಾನ್‌ನ ನಿಕೈಶೇ.1.0 ರಷ್ಟು ಏರಿಕೆ ಕಂಡಿದೆ |