ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ > ಫಾರೆಕ್ಸ್: ರೂಪಾಯಿ ಮೌಲ್ಯ ವೃದ್ಧಿ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಫಾರೆಕ್ಸ್: ರೂಪಾಯಿ ಮೌಲ್ಯ ವೃದ್ಧಿ
PTI
ಅಮೆರಿಕದ ಫೆಡರಲ್ ರಿಸರ್ವ್ ಬ್ಯಾಂಕ್‌‌ನಿಂದ ಬಡ್ಡಿ ದರ ಕಡಿತ, ವಿದೇಶಿ ಬಂಡವಾಳದ ಒಳಹರಿವಿನಲ್ಲಿ ಹೆಚ್ಚಳ ಹಾಗೂ ರಫ್ತು ವಹಿವಾಟುದಾರರಿಂದ ಡಾಲರ್‌ಗಳ ಮಾರಾಟದ ಹಿನ್ನೆಲೆಯಲ್ಲಿ ಮತ್ತೆ ರೂಪಾಯಿ ಮೌಲ್ಯ 35ಪೈಸೆಯಷ್ಟು ಏರಿಕೆ ಕಂಡಿದೆ.

ಏಷ್ಯಾ ಕರೆನ್ಸಿಗಳ ಎದುರು ಡಾಲರ್ ದುರ್ಬಲಗೊಂಡ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಏರಿಕೆ ಬೆಂಬಲ ನೀಡಿದಂತಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ದೇಶಿಯ ಕರೆನ್ಸಿ 47.32 ರೂಪಾಯಿಗಳಿಗೆ ತಲುಪಿದ್ದು, ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ 35 ಪೈಸೆ ಏರಿಕೆಯಾಗಿ 47.66/67 ರೂಪಾಯಿಗಳಿಗೆ ತಲುಪಿದೆ.

ವಿದೇಶಿ ಬಂಡವಾಳದ ಒಳಹರಿವಿನ ಹೆಚ್ಚಳ ಹಾಗೂ ರಫ್ತುವಹಿವಾಟುದಾರರಿಂದ ಡಾಲರ್‌ಗಳ ಮಾರಾಟದಿಂದಾಗಿ ರೂಪಾಯಿ ಮೌಲ್ಯ ಏರಿಕೆಗೆ ಕಾರಣವಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.

ಅಮೆರಿಕದ ರಿಸರ್ವ್ ಬ್ಯಾಂಕ್‌ ಬಡ್ಡಿ ದರವನ್ನು ಶೂನ್ಯಕ್ಕೆ ಕಡಿತಗೊಳಿಸಿದ ಹಿನ್ನೆಲೆಯಲ್ಲಿ ಡಾಲರ್ ಏಷ್ಯಾ ಕರೆನ್ಸಿಗಳ ಎದುರು ದುರ್ಬಲಗೊಂಡಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ರೂಪಾಯಿ ಮೌಲ್ಯದಲ್ಲಿ 61 ಪೈಸೆ ವೃದ್ಧಿ
ಡಾಲರ್ ಎದುರಿಗೆ ರೂಪಾಯಿ ಮೌಲ್ಯ ವೃದ್ಧಿ
ಡಾಲರ್‌ ಎದುರಿಗೆ ರೂಪಾಯಿ ಮೌಲ್ಯ ಹೆಚ್ಚಳ
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ
ಡಾಲರ್‌ಗಳ ಮಾರಾಟದಿಂದ ರೂಪಾಯಿ ಮೌಲ್ಯ ಏರಿಕೆ
ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ