ಏಷ್ಯಾ ಶೇರುಪೇಟೆಗಳ ಕುಸಿತ ಹಾಗೂ ಇತರ ಕರೆನ್ಸಿಗಳ ಎದುರು ಡಾಲರ್ ಬಲಯುತವಾದ ಹಿನ್ನೆಲೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 25ಪೈಸೆಯಷ್ಟು ಕುಸಿತ ಕಂಡಿದೆ.ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಪ್ರತಿ ಡಾಲರ್‌ಗೆ 47.20ರೂ.ಗಳಿಗೆ ತಲುಪಿತ್ತು. ಆದರೆ ಏಷ್ಯಾ ಮಾರುಕಟ್ಟೆಗಳ ಕುಸಿತ ಹಾಗೂ ಡಾಲರ್ ವಿದೇಶಿ ಕರೆನ್ಸಿಗಳ ಮುಂದೆ ಪ್ರಬಲವಾಗಿದ್ದರಿಂದ 25 ಪೈಸೆ ಕುಸಿತ ಕಂಡು 46.95/96 ರೂ.ಗಳಿಗೆ ತಲುಪಿದೆ.ಏಷ್ಯಾ ಮಾರುಕಟ್ಟೆಯ ಆರಂಭಿಕ ವಹಿವಾಟಿನಲ್ಲಿ ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಶೇ.2ರಷ್ಟು ಇಳಿಕೆ ಕಂಡಿದ್ದು,ಜಪಾನ್‌ವ ನಿಕೈ ಶೇ.1.10ರಷ್ಟು ಇಳಿಕೆ ಕಂಡಿದೆ.ಹಿಂದಿನ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯ 71 ಪೈಸೆ ಹೆಚ್ಚಳವಾಗಿ 11 ವಾರಗಳ ಅತಿ ಹೆಚ್ಚು 46.95/96ರೂಪಾಯಿಗಳಿಗೆ ತಲುಪಿತ್ತು. |