ಮುಖ್ಯ ಪುಟ > ಸುದ್ದಿ ಜಗತ್ತು > ವ್ಯವಹಾರ > ವಿದೇಶಿ ವಿನಿಮಯ > ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಡಾಲರ್ ಎದುರು ರೂಪಾಯಿ ಮೌಲ್ಯ ಏರಿಕೆ
PTI
ಹಣದುಬ್ಬರ ಇಳಿಕೆಯಾಗುವ ನಿರೀಕ್ಷೆ ಹಾಗೂ ದೇಶಿಯ ಶೇರುಪೇಟೆ ಏರಿಕೆಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಆರಂಭಿಕ ವಹಿವಾಟಿನಲ್ಲಿ ಅಮುದುದಾರರು ಡಾಲರ್ ಮಾರಾಟದಲ್ಲಿ ತೊಡಗಿದ್ದರಿಂದ ರೂಪಾಯಿ ಮೌಲ್ಯ ಡಾಲರ್ ಎದುರಿಗೆ 35 ಪೈಸೆ ಏರಿಕೆಯಾಗಿದೆ.

ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ರೂಪಾಯಿ ಮೌಲ್ಯ ಡಾಲರ್ ಎದುರಿಗೆ 47.73ರೂ.ಗಳಾಗಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ 35 ಪೈಸೆ ಏರಿಕೆ ಕಂಡಿದ್ದರಿಂದ ಡಾಲರ್‌ ಎದುರಿಗೆ 48.06/08 ರೂಪಾಯಿಗಳಿಗೆ ತಲುಪಿದೆ.

ಕ್ರಿಸ್‌ಮಸ್ ಹಬ್ಬದ ನಿಮಿತ್ಯ ಗುರುವಾರ ಶೇರುಪೇಟೆಗೆ ರಜೆಯಿದ್ದ ಕಾರಣ, ಬುಧವಾರದ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 70ಪೈಸೆ ಏರಿಕೆಯಾಗಿ 48.06/48.08 ರೂಪಾಯಿಗಳಿಗೆ ತಲುಪಿತ್ತು.

ಜಪಾನ್‌ನ ಕರೆನ್ಸಿ ಯೆನ್ ಹಾಗೂ ಇತರ ಏಷ್ಯಾ ರಾಷ್ಟ್ರಗಳ ಕರೆನ್ಸಿಗಳ ಎದುರು ಡಾಲರ್ ಸ್ಥಿರತೆ ಕಾಣದಿರುವ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಏರಿಕೆಗೆ ಕಾರಣವಾಗಿದೆ ಎಂದು ಫಾರೆಕ್ಸ್ ಡೀಲರ್‌ಗಳು ತಿಳಿಸಿದ್ದಾರೆ.

ಏಷ್ಯಾ ಶೇರುಪೇಟೆಗಳಾದ ನಿಕೈ ಆರಂಭಿಕ ವಹಿವಾಟಿನಲ್ಲಿ ಸೂಚ್ಯಂಕ ಶೇ.0.86ರಷ್ಟು ಏರಿಕೆ ಕಂಡಿದ್ದು, ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಶೇರುಪೇಟೆ ಕ್ರಿಸ್‌ಮಸ್ ರಜಾದಿನಗಳಿಂದಾಗಿ ರಜೆ ಘೋಷಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಮತ್ತಷ್ಟು
ಫಾರೆಕ್ಸ್ : ರೂಪಾಯಿ ಮೌಲ್ಯ 25ಪೈಸೆ ಕುಸಿತ
ಫಾರೆಕ್ಸ್: ರೂಪಾಯಿ ಮೌಲ್ಯ ವೃದ್ಧಿ
ರೂಪಾಯಿ ಮೌಲ್ಯದಲ್ಲಿ 61 ಪೈಸೆ ವೃದ್ಧಿ
ಡಾಲರ್ ಎದುರಿಗೆ ರೂಪಾಯಿ ಮೌಲ್ಯ ವೃದ್ಧಿ
ಡಾಲರ್‌ ಎದುರಿಗೆ ರೂಪಾಯಿ ಮೌಲ್ಯ ಹೆಚ್ಚಳ
ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿತ