ರಫ್ತು ವಹಿವಾಟುದಾರರು ಹಾಗೂ ಬ್ಯಾಂಕ್‌ಗಳು ಡಾಲರ್ ಮಾರಾಟದಲ್ಲಿ ತೊಡಗಿದ್ದರಿಂದ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 26 ಪೈಸೆ ಏರಿಕೆ ಕಂಡಿದೆ.
ವಿದೇಶಿ ವಿನಿಮಯ ಮಾರುಕಟ್ಟೆಯ ಹಿಂದಿನ ದಿನದ ವಹಿವಾಟಿನಲ್ಲಿ ಪ್ರತಿ ಡಾಲರ್‌ಗೆ 48.20 ರೂಪಾಯಿಗಳಿಗೆ ತಲುಪಿತ್ತು. ಇಂದಿನ ಆರಂಭಿಕ ವಹಿವಾಟಿನಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ 26 ಪೈಸೆ ಏರಿಕೆಯಾಗಿ 48.45/46ರೂಪಾಯಿಗಳಿಗೆ ತಲುಪಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಜಪಾನ್‌ನ ನಿಕೈ ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಶೇ.0.74ರಷ್ಟು ಇಳಿಕೆ ಕಂಡಿದ್ದು, ಹಾಂಗ್‌ಕಾಂಗ್‌ನ ಮಾರುಕಟ್ಟೆಯಲ್ಲಿ ಶೇ.0.01 ರಷ್ಟು ಕುಸಿತವಾಗಿದೆ ಎಂದು ವಿದೇಶಿ ವಿನಿಮಯ ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ. |