ವಿದೇಶಿ ವಿನಿಮಯ ಮಾರುಕಟ್ಟೆಯಲ್ಲಿ ಡಾಲರ್ ವಹಿವಾಟಿನ ಕೊರತೆ ಹಾಗೂ ವಹಿವಾಟುದಾರರು ಸ್ಥಳೀಯ ಶೇರುಪೇಟೆಯ ಗಮನ ಕೇಂದ್ರಿಕೃತಗೊಳಿಸಿದ್ದರಿಂದ ರೂಪಾಯಿ ಮೌಲ್ಯದಲ್ಲಿ 28 ಪೈಸೆ ಇಳಿಕೆಯಾಗಿದೆ. ಇಂದು ವಹಿವಾಟಿನ ಆರಂಭದಲ್ಲಿ ಪ್ರತಿ ಡಾಲರ್‌ಗೆ 49.06/10 ರೂಪಾಯಿಗಳಾಗಿದ್ದು, ಹಿಂದಿನ ದಿನದ ವಹಿವಾಟಿನಲ್ಲಿ ಪ್ರತಿ ಡಾಲರ್‌ಗೆ 49.13 ರೂಪಾಯಿಗಳಾಗಿತ್ತು. ಡಿಸೆಂಬರ್ 24ರ ನಂತರ ಡಾಲರ್ ಎದುರಿಗೆ ರೂಪಾಯಿ ಮೌಲ್ಯ ಕನಿಷ್ಟ ಇಳಿಕೆಯನ್ನು ಕಂಡಿದೆ. ಸ್ಥಳೀಯ ಶೇರುಪೇಟೆಯಲ್ಲಿ ವಿದೇಶಿ ಬಂಡವಾಳದಾರರ ಹೂಡಿಕೆ ಕುರಿತಂತೆ ವಹಿವಾಟುದಾರರು ಗಮನಹರಿಸಿದ್ದಾರೆ ಎಂದು ಮಾರುಕಟ್ಟೆಯ ಡೀಲರ್‌ಗಳು ತಿಳಿಸಿದ್ದಾರೆ. ಕಳೆದ ವರ್ಷದಲ್ಲಿ 13.3 ಬಿಲಿಯನ್ ವಿದೇಶಿ ಬಂಡವಾಳವನ್ನು ಹಿಂತೆಗೆದುಕೊಂಡಿದ್ದರಿಂದ ರೂಪಾಯಿ ಮೌಲ್ಯ ಇಳಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ. |