ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 46 ಪಾಯಿಂಟ್ಗಳ ಇಳಿಕೆ ಕಂಡಿದೆ.
ಬಿಎಸ್ಇ 30 ಷೇರು ಮಾರುಕಟ್ಟೆ ಸೂಚ್ಯಂಕ 45.87 ಪಾಯಿಂಟ್ ಇಳಿಕೆ ಕಂಡು 17,570.82ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 12.25 ಪಾಯಿಂಟ್ ಕುಸಿತ ಕಂಡು 5,262.60ಗೆ ತಲುಪಿದೆ.
ರಿಲಯನ್ಸ್ ಇಂಡಸ್ಟ್ರೀಸ್ ತನ್ನ ಬಹುಕೋಟಿ ಡಾಲರ್ಗಳ ಹೂಡಿಕೆಯನ್ನು ಶಕ್ತಿ ಉತ್ಪಾದನಾ ಕ್ಷೇತ್ರದಲ್ಲಿ ಬಂಡವಾಳ ಹೂಡುವ ನಿರ್ಧಾರ ಪ್ರಕಟಿಸಿದರೂ, ಷೇರು ಮಾರುಕಟ್ಟೆಯನ್ನು ಮೇಲಕ್ಕೇರಿಸಲು ಸಫಲವಾಗಿಲ್ಲ. ಜೊತೆಗೆ ರಿಲಯನ್ಸ್ ಇಂಡಸ್ಟ್ರೀಸ್ ಷೇರು ಮಾತ್ರ ಶೇ.1.50ಯಷ್ಟು ಇಳಿಕೆಯೆಡೆಗೆ ಸಾಗಿದೆ.
ಇನ್ನುಳಿದಂತೆ ಲಾರ್ಸನ್ ಅಂಡ್ ಟರ್ಬೋ ಮಾತ್ರ ಶೇ.1.29ರಷ್ಟು ಏರಿಕೆಯಾಗಿದೆ. ಇನ್ಫೋಸಿಸ್ ಟೆಕ್ನಾಲಜೀಸ್ ಕೂಡಾ ಏರಿಕೆ ಕಂಡಿದೆ.