ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ವಾರದಲ್ಲಿ ಶೇ.2.96ರಷ್ಟು ಏರಿಕೆ ಕಂಡ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ವಾರದಲ್ಲಿ ಉತ್ತಮ ಬೆಳವಣಿಗೆ ಕಂಡಿದ್ದು, ಷೇರುಪೇಟೆಗೆ ಹೊಸ ಚೈತನ್ಯ ಮೂಡಿಸಿದೆ.

ಬಿಎಸ್ಇ 30 ಷೇರು ಮಾರುಕಟ್ಟೆ ಸೂಚ್ಯಂಕ ಈ ವಾರದಲ್ಲಿ 505.87 ಪಾಯಿಂಟ್ ಅಂದರೆ ಶೇ.2.96ರಷ್ಟು ಏರಿಕೆ ಕಂಡು 17,570.82ಕ್ಕೆ ತಲುಪಿದೆ. ಕಳೆದ ವಾರದ ಅಂತ್ಯದಲ್ಲಿ ಮಾರುಕಟ್ಟೆ 17,064.95ರಲ್ಲಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಈ ವಾರದಲ್ಲಿ 143.25 ಪಾಯಿಂಟ್ ಅಂದರೆ ಶೇ.2.79ರಷ್ಟು ಏರಿಕೆ ಕಂಡು 5,119.35ಕ್ಕೆ ತಲುಪಿದೆ.

ಜಪಾನಿನ ನಿಕ್ಕಿ ವಾರದಲ್ಲಿ ಶೇ.3ರಷ್ಟು ಏರಿಕೆ ದಾಖಲಿಸಿದೆ.

ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.2.08ರಷ್ಟು ವಾರದಲ್ಲಿ ಉನ್ನತಿ ಕಂಡಿದೆ.

ಚೀನಾದ ಶಾಂಘೈ ಮಾರುಕಟ್ಟೆ ಶೇ.2.21ರಷ್ಟು ವಾರದಲ್ಲಿ ಇಳಿಕೆ ಕಂಡಿದೆ.

ಲಂಡನ್‌ನ ಎಫ್‌ಟಿಎಸ್ಇ ವಾರದಲ್ಲಿ ಶೇ.1.69ರಷ್ಟು ಏರಿದರೆ, ಫ್ರಾನ್ಸ್ ಮಾರುಕಟ್ಟೆ ಶೇ.3.7ರಷ್ಟು ಏರಿದೆ. ಜರ್ಮನ್ ಮಾರುಕಟ್ಟೆ ಶೇ.2.8ರಷ್ಟು ಚೇತರಿಸಿದೆ.

ನಾಸ್ಡಾಕ್ ವಾರದಲ್ಲಿ ಶೇ.2.95ರಷ್ಟು ಏರಿಕೆ ಕಂಡರೆ, ಎಸ್ ಅಂಡ್ ಪಿ ಶೇ.2.37ರಷ್ಟು ಚೇತರಿಸಿದೆ. ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.2.35ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ