ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಎರಡು ತಿಂಗಳಲ್ಲೇ ಉತ್ತಮ ಏರುಗತಿ ದಾಖಲಿಸಿದ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಉತ್ತಮ ಏರಿಕೆ ಕಂಡಿದೆ. ಕಳೆದೆರಡು ತಿಂಗಳಲ್ಲಿ ಕಾಣದ ಮಟ್ಟಕ್ಕೆ ಷೇರು ಪೇಟೆ ಏರಿದ್ದು 306 ಪಾಯಿಂಟ್ ಏರಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 305.73 ಪಾಯಿಂಟ್ ಅಂದರೆಶೇ.1.74ರಷ್ಟು ಏರಿಕೆ ಕಂಡು 17,876.55ಕ್ಕೆ ತಲುಪಿದೆ. ಬೆಳಗ್ಗಿನ ವಹಿವಾಟಿನಲ್ಲಿ 233 ಪಾಯಿಂಟ್ ಏರಿಕೆ ದಾಖಲಿಸಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.1.72ರಷ್ಟು ಏರುಗತಿ ದಾಖಲಿಸಿ 5,353.30ಗೆ ತಲುಪಿದೆ.

ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಮಾರುಕಟ್ಟೆ ಷೇ.3ರಷ್ಟು ಭಾರೀ ಏರಿಕೆ ಕಂಡಿದೆ. ಜಪಾನಿನ ನಿಕ್ಕಿ ಶೇ.2.43ರ ಏರಿಕೆ ದಾಖಲಿಸಿದರೆ, ಚೀನಾದ ಶಾಂಘೈ ಮಾರುಕಟ್ಟೆ ಶೇ.2.90 ಏರಿಕೆ ದಾಖಲಿಸಿದೆ.

ಐಸಿಐಸಿಐ ಬ್ಯಾಂಕ್ ಶೇ.3.89, ಎಚ್‌ಡಿಎಫ್‌ಸಿ ಶೇ.2, ಡಿಎಲ್‌ಎಫ್ ಶೇ.2.76, ಎಲ್ಅಂಡ್‌ಟಿ ಶೇ.2.12ರಷ್ಟು ಏರಿಕೆ ಕಂಡಿವೆ. ಬಿಎಸ್ಇ 30 ಷೇರುಗಳ ಪೈಕಿ 28 ಷೇರುಗಳು ಏರಿಕೆ ಕಂಡರೆ, ಎರಡು ಷೇರುಗಳು ಇಳಿಕೆ ಕಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ