ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಂಚ ಕುಸಿತ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಬೆಳಗ್ಗಿನ ದಿನದಾರಂಭದಲ್ಲಿ 90 ಪಾಯಿಂಟ್ ಇಳಿಕೆ ಕಂಡಿದೆ.

ಇದಕ್ಕೂ ಮೊದಲು ಬಿಎಸ್ಇ 30 ಷೇರು ಸೂಚ್ಯಂಕ 305.73 ಪಾಯಿಂಟ್‌ಗಳಷ್ಟು ಏರಿಕೆಯಾಗಿತ್ತು. ಆದರೆ ಇಂದಿನ ದಿನದಾರಂಭದಲ್ಲಿ 90.47 ಪಾಯಿಂಟ್ ಅಂದರೆ ಶೇ.0.5ರಷ್ಟು ಇಳಿಕೆಯಾಗಿದ್ದು 17,786.08ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 27.20 ಪಾಯಿಂಟ್ ಅಂದರೆ ಶೇ.0.50ಯಷ್ಟು ಇಳಿಕೆಯಾಗಿ 5,326.10ಕ್ಕೆ ತಲುಪಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಶೇ.0.42ರಷ್ಟು ಇಳಿಕೆಯಾದರೆ, ಇನ್ಫೋಸಿಸ್ ಶೇ.0.84, ಸ್ಟೆರ್‌ಲೈಟ್ ಶೇ.2.91, ಟಾಟಾ ಸ್ಟೀಲ್ ಶೇ.0.91, ಹಿಂಡಲ್ಕೋ ಶೇ.1.11ರಷ್ಟು ಇಳಿಕೆ ಕಂಡಿದೆ.

ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.30ಯಷ್ಟು ಇಳಿಕೆಯಾದರೆ, ನಿಕ್ಕಿ ಶೇ.1.04ರಷ್ಟು ಕುಸಿತ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ