ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 127 ಪಾಯಿಂಟ್ ಕುಸಿದ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 127 ಪಾಯಿಂಟ್ ಕುಸಿತ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 126.86 ಪಾಯಿಂಟ್ ಇಳಿಕೆ ಕಂಡಿದ್ದು 17,749.69ಕ್ಕೆ ತಲುಪಿದೆ. ಇದಕ್ಕೂ ಮೊದಲು ಸೋಮವಾರದ ವಹಿವಾಟಿನ್ಲಲಿ 306 ಪಾಯಿಂಟ್ ಚೇತರಿಕೆ ಕಂಡಿತ್ತು.

ಬಿಎಸ್ಇ 30 ಷೇರುಗಳ ಪೈಕಿ 27 ಷೇರುಗಳು ಇಳಿಕೆ ಕಂಡರೆ, ಉಳಿದ ಮೂರು ಷೇರುಗಳು ಏರಿಕೆ ಕಂಡಿವೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 36.75 ಪಾಯಿಂಟ್ ಇಳಿಕೆ ಕಂಡು 5,316.55ಕ್ಕೆ ತಲುಪಿದೆ.

ಮೆಟಲ್ ಷೇರುಗಳು ಶೇ.1.90ಯಷ್ಟು ಇಳಿಕೆ ಕಂಡಿದೆ. ಸ್ಟೆರ್‌ಲೈಟ್ ಇಂಡಸ್ಟ್ರೀಸ್ ಶೇ.2.69ರಷ್ಟು ಇಳಿಕೆ ಕಂಡಿದೆ. ಐಟಿ ಷೇರುಗಳೂ ಶೇ.1.24ರಷ್ಟು ಇಳಿಕೆ ದಾಖಲಿಸಿದೆ. ವಿಪ್ರೋ ಶೇ.1.80ರಷ್ಟು ಕುಸಿತ ಕಂಡಿದೆ. ಬ್ಯಾಂಕಿಂಗ್ ವಲಯವೂ ಶೇ.0.81ರಷ್ಟು ಇಳಿಕೆ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ