ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 120 ಪಾಯಿಂಟ್ ಕುಸಿತ ಕಂಡ ಷೇರು ಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 120 ಪಾಯಿಂಟ್ ಇಳಿಕೆ ಕಂಡಿದೆ. ಜಾಗತಿಕ ವಹಿವಾಟು ದುರ್ಬಲವಾಗಿರುವುದರ ಫಲವಾಗಿ ಹೂಡಿಕೆದಾರರು ತಮ್ಮ ಷೇರುಗಳನ್ನು ಮಾರಿದ್ದರಿಂದಾಗಿ ಈ ಇಳಿಕೆ ದಾಖಲಾಗಿದೆ.

ಬಿಎಸ್ಇ 30 ಷೇರು ಸೂಚ್ಯಂಕ ಈ ಮೊದಲ ವಹಿವಾಟಿನಲ್ಲಿ 126.86 ಪಾಯಿಂಟ್ ಇಳಿಕೆ ದಾಖಲಿಸಿತ್ತು. ಇದೀಗ ಇಂದಿನ ದಿನದಾರಂಭದ ವಹಿವಾಟಿನಲ್ಲೂ 120.50 ಪಾಯಿಂಟ್ ಅಂದರೆ ಶೇ.0.67ರಷ್ಟು ಕುಸಿತ ಕಂಡಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.11.65 ಪಾಯಿಂಟ್ ಅಂದರೆ ಶೇ.0.22ಷ್ಟು ಕುಸಿದಿದೆ.

ಇಳಿಕೆ ದಾಖಲಿಸಿದ ಷೇರುಗಳ ಪೈಕಿ ಲಾರ್ಸೆನ್ ಅಂಡ್ ಟರ್ಬೋ ಶೇ.1.49ರಷ್ಟು ಇಳಿಕೆ ಕಂಡರೆ, ಸ್ಟೆರ್‌ಲೈಟ್ ಇಂಡಸ್ಟ್ರೀಸ್ ಶೇ.0.59, ಹಿಂಡಲ್ಕೋ ಶೇ.0.33, ಡಿಎಲ್ಎಫ್ ಶೇ.1.06, ಜೈಪ್ರಕಾಶ್ ಅಸೋಸಿಯೇಟ್ಸ್ ಶೇ.1ರಷ್ಟು ಇಳಿಕೆ ಕಂಡಿವೆ.

ಜಪಾನಿನ ನಿಕ್ಕಿ ಶೇ.1.43ರಷ್ಟು ಇಳಿಕೆ ದಾಖಲಿಸಿದರೆ, ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.42ರಷ್ಟು ಇಳಿಕೆ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ