ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಂಚ ಏರುಗತಿಯ ಬೆಳವಣಿಗೆ ಕಂಡ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಕೊಂಚ ಏರುಗತಿಯ ಬೆಳವಣಿಗೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ ಇದಕ್ಕೂ ಮೊದಲು ಬೆಳಗ್ಗಿನ ಆರಂಭದ ವಹಿವಾಟಿನಲ್ಲಿ 120 ಪಾಯಿಂಟ್ ಇಳಿಕೆ ಕಂಡಿತ್ತಾದರೂ, ದಿನದಂತ್ಯದ ವಹಿವಾಟಿನಲ್ಲಿ ಕೊಂಚ ಏರುಗತಿಯ ಬೆಳವಣಿಗೆ ತೋರಿಸಿದ್ದು ಕೇವಲ 6.25 ಪಾಯಿಂಟ್ ಏರಿಕೆ ದಾಖಲಿಸಿ 17,755.94ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 6.60 ಪಾಯಿಂಟ್ ಏರಿಕೆ ಕಂಡು 5,323.15ಕ್ಕೆ ತಲುಪಿದೆ.

ಲಾರ್ಸೆನ್ ಅಂಡ್ ಟರ್ಬೋ ಶೇ.1ರಷ್ಟು ಇಳಿಕೆ ಕಂಡರೆ, ರಿಲಯನ್ಸ್ ಇಂಡಸ್ಟ್ರೀಸ್ ಶೇ.0.47ರಷ್ಟು ಕುಸಿತ ಕಂಡಿದೆ.

ಇನ್ಫೋಸಿಸ್, ಟಾಟಾ ಕನ್ಸಲ್ಟೆನ್ಸಿ, ಮಾರುತಿ ಸುಝುಕಿ, ಹೀರೋ ಹೊಂಡಾ, ಎಚ್‌ಡಿಎಫ್‌ಸಿ ಲಿಮಿಟೆಡ್, ಎಸಿಸಿ ಲಿಮಿಟೆಡ್ ಏರಿಕೆ ಕಂಡಿವೆ. ರಿಯಾಲ್ಟಿ ವಲಯದಲ್ಲಿ ಷೇರುಗಳು ಶೇ.1.43ರಷ್ಟು ಏರಿಕೆ ಕಂಡಿವೆ. ಡಿಎಲ್ಎಫ್, ರಿಲಯನ್ಸ್ ಇನ್ಫ್ರಾ ಷೇರುಗಳೂ ಕೂಡಾ ಏರಿಕೆ ದಾಖಲಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ