ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಚಿಗಿತುಕೊಂಡ ಖರೀದಿ: ಏರಿಕೆ ಕಂಡ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 68 ಪಾಯಿಂಟ್ ಏರಿಕೆ ಕಂಡಿದ್ದು, ಖರೀದಿಯ ಉತ್ಸಾಹ ಹೆಚ್ಚಿದ್ದರಿಂದ ಈ ಚೇತರಿಕೆ ಕಂಡಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಬಿಎಸ್ಇ 30 ಷೇರು ಸೂಚ್ಯಂಕ 68.73 ಪಾಯಿಂಟ್ ಅಂದರೆ ಶೇ.0.38ರಷ್ಟು ಏರಿಕೆ ಕಂಡು 17,824.67ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 20.30 ಪಾಯಿಂಟ್ ಏರಿಕೆ ಕಂಡು 5,343.45ಗೆ ತಲುಪಿದೆ.

ಏರಿಕೆ ಕಂಡ ಷೇರುಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಶೇ.0.17ರಷ್ಟು ಚೇತರಿಕೆ ಕಂಡರೆ, ಸ್ಟೈರ್‌ಲೈಟ್ ಇಂಡಸ್ಟ್ರೀಸ್ ಶೇ.1.48, ಟಾಟಾ ಸ್ಟೀಲ್ ಶೇ.1.04, ಎಸಿಸಿ ಶೇ.0.70, ಲಾರ್ಸೆನ್ ಅಂಡ್ ಟರ್ಬೋ ಶೇ.1.52, ಐಟಿಸಿ ಶೇ.0.94ರಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ