ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಂಚ ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 25 ಪಾಯಿಂಟ್ ಇಳಿಕೆ ಕಂಡಿದೆ. ರಿಯಾಲ್ಟಿ ಹಾಗೂ ಬ್ಯಾಂಕ್ ವಲಯಗಳ ಷೇರುಗಳ ಮಾರಾಟ ಹೆಚ್ಚಿರುವುದರಿಂದ ಈ ಇಳಿಕೆ ದಾಖಲಾಗಿದೆ.

ಬಿಎಸ್ಇ 30 ಷೇರು ಸೂಚ್ಯಂಕ 25.50 ಪಾಯಿಂಟ್ ಇಳಿಕೆ ಕಂಡು 17,730.24ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 2.55 ಪಾಯಿಂಟ್ ಇಳಿಕೆ ಕಂಡಿದೆ.

ಬಿಎಸ್ಇ 30 ಷೇರುಗಳ ಪೈಕಿ 18 ಷೇರುಗಳು ಇಳಿಕೆ ಕಂಡರೆ, ಉಳಿದವು ಏರಿಕೆ ಕಂಡಿವೆ. ರಿಯಾಲ್ಟಿ, ಆಯಿಲ್, ಗ್ಯಾಸ್, ಬ್ಯಾಂಕಿಂಗ್ ಹಾಗೂ ಮೆಟಲ್ ಷೇರುಗಳು ಇಳಿಕೆಯ ಹಾದಿಯಲ್ಲಿವೆ.

ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ವಿಪ್ರೋ, ಎಚ್‌ಸಿಎಲ್ ಟೆಕ್ನಾಲಜೀಸ್, ಕೋಟಕ್ ಮಹೀಂದ್ರಾ ಬ್ಯಾಂಕ್, ಐಎನ್‌ಜಿ ಗ್ರೂಪ್ ಮತ್ತಿತರ ಷೇರುಗಳು ಇಳಿಕೆ ಕಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ