ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 92 ಪಾಯಿಂಟ್ ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 91 ಪಾಯಿಂಟ್ ಇಳಿಕೆ ಕಂಡಿದೆ. ಜಾಗತಿಕ ಮಾರುಕಟ್ಟೆಯ ದುರ್ಬಲ ಸ್ಥಿತಿ ಹಾಗೂ ಮೆಟಲ್, ಫೈನಾನ್ಶಿಯಲ್ ವಲಯಗಳ ಷೇರುಗಳ ಇಳಿಕೆ ಷೇರು ಮಾರುಕಟ್ಟೆಯನ್ನು ಇಳಿಕೆಯೆಡೆಗೆ ತಳ್ಳಿದೆ.

ಬಿಎಸ್ಇ 30 ಷೇರು ಸೂಚ್ಯಂಕ 91.64 ಪಾಯಿಂಟ್ ಅಂದರೆ ಶೇ.0.51 ಪಾಯಿಂಟ್ ಇಳಿಕೆ ಕಂಡು 17,638.60ಕ್ಕೆ ತಲುಪಿದೆ. ಇದಕ್ಕೂ ಮೊದಲು 25.70 ಪಾಯಿಂಟ್ ಇಳಿಕೆ ಕಂಡಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 30.25 ಪಾಯಿಂಟ್ ಅಂದರೆ ಶೇ.0.56ರಷ್ಟು ಇಳಿಕೆ ಕಂಡು 5,290.35ಕ್ಕೆ ತಲುಪಿದೆ.

ಮೆಟಲ್ ಷೇರುಗಳ ಪೈಕಿ ಸ್ಟೆರ್‌ಲೈಟ್ ಇಂಡಸ್ಟ್ರೀಸ್ ಶೇ.0.86ರಷ್ಟು ಇಳಿಕೆ ಕಂಡರೆ, ಟಾಟಾ ಸ್ಟೀಲ್ ಶೇ.0.77, ಹಿಂಡಲ್ಕೋ ಶೇ.0.17ರಷ್ಟು ಇಳಿಕೆಯಾಗಿದೆ. ಇನ್ನುಳಿದಂತೆ, ದೈತ್ಯ ಇನ್ಫೋಸಿಸ್ ಟೆಕ್ನಾಲಜೀಸ್ ಶೇ.0.85, ರಿಲಯನ್ಸ್ ಇಂಡಸ್ಟ್ರೀಸ್ ಶೇ.0.50ಯಷ್ಟು ಇಳಿದಿದೆ.

ಸ್ಟೇಟ್ ಬ್ಯಾಂಕ್ ಆಫ್ ಿಂಡಿಯಾ ಶೇ.0.51, ಐಸಿಐಸಿಐ ಬ್ಯಾಂಕ್ ಶೇ.1.15ರಷ್ಟು ಕುಸಿದಿದೆ.

ಇದೇ ವೇಳೆ, ಜಪಾನಿನ ನಿಕ್ಕಿ ಷೇರು ಸೂಚ್ಯಂಕ ಶೇ.1.45ರಷ್ಟು ಇಳಿದಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಷೇರು ಯಾವುದೇ ಏರಿಳಿತ ಕಾಣದೆ ತಟಸ್ಥವಾಗಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1.41ರಷ್ಟು ಇಳಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ