ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಷೇರುಪೇಟೆ ಕುಸಿತ, ಆಯಿಲ್ ಗ್ಯಾಸ್ ಷೇರು ಭರ್ಜರಿ ಏರಿಕೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 155 ಪಾಯಿಂಟ್‌ಗಳಷ್ಟು ಕುಸಿದಿರುವ ಮೂಲಕ ವಾರಾಂತ್ಯದ ವಹಿವಾಟಿನಲ್ಲಿ ಕುಸಿತ ದಾಖಲಾಗಿದೆ.

ಬಿಎಸ್ಇ 30 ಷೇರು ಸೂಚ್ಯಂಕ 155.71 ಪಾಯಿಂಟ್ ಇಳಿಕೆ ಕಂಡಿದ್ದು, 17,574.53ಕ್ಕೆ ತಲುಪಿದೆ.

ಬಿಎಸ್ಇ 30 ಷೇರುಗಳ ಪೈಕಿ 22 ಷೇರುಗಳು ಇಳಿಕೆ ದಾಖಲಿಸಿದ್ದು, ಉಳಿದವು ಏರಿಕೆ ಕಂಡಿವೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 51.55 ಪಾಯಿಂಟ್ ಇಳಿಕೆ ಕಂಡು 5,269.05ಕ್ಕೆ ತಲುಪಿದೆ.

ಬ್ಯಾಕಿಂಗ್ ಷೇರುಗಳು ಶೇ.2.19ರಷ್ಟು ಇಳಿಕೆ ಕಂಡರೆ, ಮೆಟಲ್ ಸೂಚ್ಯಂಕ ಶೇ.1.85ರಷ್ಟು ಕುಸಿದಿದೆ. ಐಟಿ ಷೇರುಗಳು ಶೇ.1.42, ರಿಯಾಲ್ಟಿ ಷೇರುಗಳು ಸೇ.1.08ರಷ್ಟು ಕುಸಿದಿವೆ.

ಆದರೆ ಈ ನಡುವೆ ಹಿಂದೂಸ್ತಾನ್ ಪೆಟ್ರೋಲಿಯಂ ಷೇರುಗಳು ಸೇ.13.66ರಷ್ಟು ಭರ್ಜರಿ ಏರಿಕೆ ಕಂಡಿದ್ದು, ಭಾರತ್ ಪೆಟ್ರೋಲಿಯಂ ಷೇರು ಶೇ.12.84ರಷ್ಟು ಚೇತರಿಸಿದೆ. ಆಯಿಲ್ ಅಂಡ್ ಗ್ಯಾಸ್ ಷೇರುಗಳು ಶೇ.2.88ರಷ್ಟು ಏರಿದ್ದು ಇದು ಪ್ರೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯ ಫಲವಾಗಿದೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಏಷ್ಯನ್ ಮಾರುಕಟ್ಟೆ ಇಳಿಕೆ ಕಂಡಿದ್ದು ಯುರೋಪಿಯನ್ ಷೇರುಗಳೂ ಕೂಡಾ ಇಳಿಕೆಯ ಹಾದಿಯಲ್ಲಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ