ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 107 ಪಾಯಿಂಟ್ ಚಿಗಿತುಕೊಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದಲ್ಲಿ 107 ಪಾಯಿಂಟ್ ಏರಿಕೆ ಕಂಡಿದ್ದು, ರಿಲಯನ್ಸ್ ಷೇರುಗಳ ಏರಿಕೆಯಿಂದಾಗಿ ಷೇರುಪೇಟೆ ಮತ್ತಷ್ಟು ಬಲವೃದ್ಧಿಗೊಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ ದಿನದಾರಂಭದಲ್ಲಿ 107.43 ಪಾಯಿಂಟ್ ಅಂದರೆ ಶೇ.0.61ರಷ್ಟು ಏರಿಕೆಯಾಗಿ 17,681.96ಕ್ಕೆ ತಲುಪಿದೆ.

ರಾಷ್ಟ್ರೀಯ ಷಏರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 32.30 ಪಾಯಿಂಟ್ ಅಂದರೆ ಶೇ.0.61ರಷ್ಟು ಏರಿಕೆಯಾಗಿ 5,301.35ಕ್ಕೆ ತಲುಪಿದೆ.

ರಿಲಯನ್ಸ್ ಕಮ್ಯುನಿಕೇಷನ್ಸ್ ಶೇ.6ರಷ್ಟು ಏರಿಕೆ ಕಂಡಿದೆ. ಜಿಟಿಎಲ್ ಇನ್‌ಫ್ರಾಸ್ಟ್ರಕ್ಚರ್ ಶೇ.6.28ರಷ್ಟು ಏರಿಕೆಯಾಗಿದೆ.

ಏರಿಕೆ ಕಂಡ ಷೇರುಗಳ ಪೈಕಿ ರಿಲಯನ್ಸ್ ಇನ್‌ಫ್ರಾ ಶೇ.1.02ರಷ್ಟು ಏರಿಕೆಯಾದರೆ, ರಿಲಯನ್ಸ್ ಇಂಡಸ್ಟ್ರೀಸ್ ಶೇ.0.40, ಒಎನ್‌ಜಿಸಿ ಶೇ.1.98, ಲಾರ್ಸೆನ್ ಅಂಡ್ ಟರ್ಬೋ ಶೇ.0.78, ಇನ್ಫೋಸಿಸ್ ಟೆಕ್ನಾಲಜೀಸ್ ಶೇ.012, ಟಾಟಾ ಸ್ಟೀಲ್ ಶೇ.0.77ರಷ್ಟು ಏರಿದೆ.

ಆಯಿಲ್ ಹಾಗೂ ಗ್ಯಾಸ್ ಷೇರು ಸೂಚ್ಯಂಕ ಶೇ.1.27ರಷ್ಟು ಏರಿದೆ. ಐಒಸಿ ಶೇ.5.49, ಎಚ್‌ಪಿಸಿಎಲ್ ಶೇ.5.32, ಬಿಪಿಸಿಎಲ್ ಶೇ.2.31ರಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ