ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 167 ಪಾಯಿಂಟ್ ಏರಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 167 ಪಾಯಿಂಟ್ ಏರಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 166.81 ಪಾಯಿಂಟ್ ಅಂದರೆ ಶೇ.0.95ರಷ್ಟು ಏರಿಕೆ ಕಂಡು 17,700.90ಕ್ಕೆ ತಲುಪಿದೆ. ಇದಕ್ಕೂ ಮೊದಲು ಬೆಳಗ್ಗಿನ ವಹಿವಾಟಿನಲ್ಲಿ 160 ಪಾಯಿಂಟ್ ಇಳಿಕೆಯಾಗಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 56.35 ಪಾಯಿಂಟ್ ಅಂದರೆ ಶೇ.1.07ರಷ್ಟು ಏರಿಕೆಯಾಗಿದ್ದು 5,312.50ಕ್ಕೆ ತಲುಪಿದೆ.

ಬಿಎಸ್ಇ 30 ಷೇರುಗಳ ಪೈಕಿ 25 ಷೇರುಗಳು ಏರಿಕೆಯಾದರೆ 5 ಷೇರುಗಳು ಇಳಿಕೆಯಾಗಿವೆ.

ಆಯಿಲ್ ಹಾಗೂ ಗ್ಯಾಸ್ ಷೇರುಗಳು ಶೇ.1.62ರಷ್ಟು ಏರಿಕೆ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಶೇ.1.84, ಒಎನ್‌ಜಿಸಿ ಶೇ.1.11, ಹಿಂದೂಸ್ತಾನ್ ಪೆಟ್ರೋಲಿಯಂ ಶೇ.7.94, ಇಂಡಿಯನ್ ಆಯಿಲ್ ಕಾರ್ಪ್ ಶೇ.2.34, ಭಾರತ್ ಪೆಟ್ರೋಲಿಯಂ ಶೇ.4.29ರಷ್ಟು ಏರಿದೆ.

ಎಫ್ಎಂಸಿಜಿ ಶೇ.1.90ರಷ್ಟು, ಆಟೋ ವಲಯದ ಷೇರುಗಳು ಶೇ.1.07, ರಿಯಾಲ್ಟಿ ಷೇರುಗಳು ಶೇ.0.93, ಪವರ್ ವಲಯ ಶೇ.0.78, ಬ್ಯಾಂಕಿಂಗ್ ಷೇರು ವಲಯ ಶೇ.0.76ರಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ