ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ದುರ್ಬಲ ಜಾಗತಿಕ ಮಾರುಕಟ್ಟೆ; ಶೇರುಪೇಟೆ ಕುಸಿತ (Sensex | nifty | Bombay stock exchange | Global Market)
Bookmark and Share Feedback Print
 
ಜಾಗತಿಕವಾಗಿ ಕಂಡುಬಂದ ದುರ್ಬಲ ವಹಿವಾಟು ಭಾರತದ ಮಾರುಕಟ್ಟೆಯಲ್ಲಿಯೂ ಪ್ರತಿಫಲಿಸಿದ್ದು, ಗುರುವಾರದ ವಹಿವಾಟಿನಲ್ಲಿ ಮುಂಬೈನ ಬಿಎಸ್‌ಇ ಸೂಚ್ಯಂಕ 192 ಅಂಶಗಳ ಕುಸಿತ ಕಂಡಿದೆ.

ಲೋಹ, ಸ್ಥಿರಾಸ್ತಿ, ಬ್ಯಾಂಕಿಂಗ್ ಮತ್ತು ಆಟೋ ಕ್ಷೇತ್ರದ ಶೇರುಗಳು ಹಿನ್ನಡೆ ಅನುಭವಿಸಿದೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.

ಕಳೆದ ದಿನದ ವಹಿವಾಟಿನಲ್ಲಿ 167 ಅಂಶ ಮುನ್ನಡೆ ಸಾಧಿಸಿದ್ದ ಶೇರುಪೇಟೆ ಇಂದಿನ ದಿನದಲ್ಲಿ 191.57 ಅಂಶ ಕುಸಿತ ಕಂಡು 17,509.33 ಅಂಶಕ್ಕೆ ತಲುಪಿದೆ. ರಿಲಯನ್ಸ್ ಇಂಡಸ್ಟ್ರಿಸ್ ಮತ್ತು ಇನ್ಫೋಸಿಸ್ ಟೆಕ್ನಾಲಾಜಿಸ್ ಶೇರುಗಳು ಕೂಡಾ ಹಿನ್ನಡೆ ಅನುಭವಿಸಿವೆ.

ಅದೇ ರೀತಿ ದೇಶಿಯ ಶೇರುಪೇಟೆ ನಿಫ್ಟಿ ಕೂಡಾ 61.10 ಪಾಂಯಿಂಟ್ ಕುಸಿತ ಕಾಣುವ ಮೂಲಕ 5,251.40 ಅಂಶಗಳಿಗೆ ತಲುಪಿದೆ.

ತಾಜಾ ಸುದ್ದಿಗಳು ತಕ್ಷಣ ಲಭ್ಯವಾಗಲು ಟ್ವಿಟ್ಟರ್‌ನಲ್ಲಿ 'ವೆಬ್‌ದುನಿಯಾ'ವನ್ನು ಫಾಲೋ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಸಂಬಂಧಿತ ಮಾಹಿತಿ ಹುಡುಕಿ