ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಶೇರುಪೇಟೆ: ಮುಂದುವರಿದ ಸೂಚ್ಯಂಕ ಕುಸಿತ (Sensex | BSE | Nifty | Reliance Industries | Infosys)
Bookmark and Share Feedback Print
 
ಶೇರುಪೇಟೆ ಆರಂಭದಲ್ಲಿ ಚೇತರಿಕೆ ಕಂಡಿರುವ ಮಧ್ಯೆಯು, ಹೂಡಿಕೆದಾರರು ಮಾರಟದತ್ತ ಹೆಚ್ಚಿನ ಆಸಕ್ತಿ ತೋರಿದ್ದರಿಂದ ವಹಿವಾಟಿನ ಮುಕ್ತಾಯಕ್ಕೆ 48 ಪಾಯಿಂಟ್‌ಗಳ ಕುಸಿತ ಕಂಡಿದೆ.

ಬಿಎಸ್‌ಇ-30 ಸೂಚ್ಯಂಕ ಹಿಂದಿನ ದಿನದ ವಹಿವಾಟಿನ ಮುಕ್ತಾಯಕ್ಕೆ 191ಪಾಯಿಂಟ್‌ಗಳ ಇಳಿಕೆ ಕಂಡಿತ್ತು. ಇಂದಿನ ವಹಿವಾಟಿನ ಮುಕ್ತಾಯಕ್ಕೆ ಮತ್ತೆ 48.38 ಪಾಯಿಂಟ್‌ಗಳ ಕುಸಿತ ಕಂಡು 17,460.95 ಅಂಕಗಳಿಗೆ ತಲುಪಿದೆ.

ರಾಷ್ಟ್ರೀಯ ಸೂಚ್ಯಂಕ ನಿಫ್ಟಿ ಕೂಡಾ ವಹಿವಾಟಿನ ಮುಕ್ತಾಯಕ್ಕೆ 14.30 ಪಾಯಿಂಟ್‌ಗಳ ಇಳಿಕೆ ಕಂಡು 5,237.10 ಅಂಕಗಳಿಗೆ ತಲುಪಿದೆ.

ಏಷ್ಯಾ ಮಾರುಕಟ್ಟೆಗಳ ದುರ್ಬಲ ವಹಿವಾಟು, ಹಾಗೂ ಯುರೋಪ್ ಮಾರುಕಟ್ಟೆಗಳ ಚೇತರಿಕೆಯಿಂದಾಗಿ ಮಾರುಕಟ್ಟೆ ಕುಸಿತ ಕಂಡಿದೆ ಎಂದು ಡೀಲರ್‌ಗಳು ತಿಳಿಸಿದ್ದಾರೆ.

ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಶೇರುಗಳು ಅಲ್ಪ ಚೇತರಿಕೆ ಕಂಡಿದ್ದರಿಂದ, ಶೇರುಪೇಟೆಯ ಮತ್ತಷ್ಟು ಕುಸಿತವನ್ನು ತಡೆಯಲು ಸಹಕಾರಿಯಾಯಿತು.

ರಿಲಯನ್ಸ್ ಇಂಡಸ್ಟ್ರೀಸ್ ಶೇ.72 ರಿಲಯನ್ಸ್ ಮತ್ತು ಇನ್ಫೋಸಿಸ್ ಶೇರುಗಳು ಶೇ.23ರಷ್ಟು ಚೇತರಿಕೆ ಕಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ