ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಂಚ ಇಳಿಮುಖವಾಗಿರುವ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 20.86 ಪಾಯಿಂಟ್ ಇಳಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 20.86 ಪಾಯಿಂಟ್ ಇಳಿಕೆ ಕಂಡು 17,440.09ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 48.38 ಪಾಯಿಂಟ್ ಇಳಿಕೆಯನ್ನೇ ಕಂಡಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 11.25 ಪಾಯಿಂಟ್ ಇಳಿಕೆ ಕಂಡು 5,225.85ಕ್ಕೆ ತಲುಪಿದೆ.

ರಿಲಯನ್ಸ್ ನ್ಯಾಚುರಲ್ ರಿಸೋರ್ಸಸ್ ಲಿಮಿಟೆಡ್ ಅನಿಲ್ ಧೀರೂಬಾಯಿ ಅಂಬಾನಿ ಗ್ರೂಪ್‍‌ನಲ್ಲಿ ವಿಲೀನಗೊಳ್ಳುವ ಜೊತೆಗೆ ಷೇರು ಮಾರುಕಟ್ಟೆಗೂ ಪರಿಣಾಮ ತಟ್ಟಿದೆ. ರಿಲಯನ್ಸ್ ನ್ಯಾಚುರಲ್ ರಿಸೋರ್ಸಸ್ ಷೇರು ಶೇ.25.92ರಷ್ಟು ಕುಸಿದರೆ, ರಿಲಯನ್ಸ್ ಪವರ್ ಶೇ.4.68ರಷ್ಟು ಏರಿಕೆಯಾಗಿದೆ.

ಇದೇ ವೇಳೆ ಏಷ್ಯನ್ ಮಾರುಕಟ್ಟೆಯೂ ಕುಸಿದಿದ್ದು ಎಂಎಸ್‌ಸಿಐ ಏಷ್ಯಾ ಪೆಸಿಫಿಕ್ ಇಂಡೆಕ್ಸ್ ಶೇ.3.4ರಷ್ಟು ಕುಸಿತ ಕಂಡಿದೆ. ಯುಎಸ್, ಯುರೋಪ್, ಚೀನಾ ಮಾರುಕಟ್ಟೆಯೂ ಇಳಿಕೆ ಹಾದಿಯಲ್ಲಿದೆ.

ಇನ್ನೊಂದೆಡೆ ರೂಪಾಯಿ ಮೌಲ್ಯ ಕೂಡಾ ಕುಸಿತ ಕಂಡಿದ್ದು ಡಾಲರ್ ಎದುರು 18 ಪೈಸೆ ಕುಸಿತ ಕಂಡು 46.76.77ಕ್ಕೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ