ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 60 ಪಾಯಿಂಟ್ ಚೇತರಿಕೆ ಕಂಡ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದಲ್ಲಿ 60 ಪಾಯಿಂಟ್ ಏರಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ ದಿನದಾರಂಭದಲ್ಲಿ 59.50 ಪಾಯಿಂಟ್ ಅಂದರೆ ಶೇ.0.34ರಷ್ಟು ಏರಿಕೆ ಕಂಡು 17,500.94ಕ್ಕೆ ತಲುಪಿದೆ. ಇದಕ್ಕೂ ಮೊದಲು 67 ಪಾಯಿಂಟ್ ಇಳಿಕೆಯಾಗಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 15.20 ಪಾಯಿಂಟ್ ಅಂದರೆ ಶೇ.0.29ರಷ್ಟು ಏರಿಕೆ ಕಂಡು 5,251.10ಕ್ಕೆ ತಲುಪಿದೆ.

ಏರಿಕೆ ಕಂಡ ಷೇರುಗಳ ಪೈಕಿ, ರಿಲಯನ್ಸ್ ಇಂಡಸ್ಟ್ರೀಸ್ ಷೇರು ಶೇ.0.50ರಷ್ಟು ಏರಿಕೆ ಕಂಡರೆ, ಇನ್ಫೋಸಿಸೆ ಟೆಕ್ನಾಲಜೀಸ್ ಷೇರು ಶೇ.0.27ರಷ್ಟು ಚೇತರಿಕೆ ಕಂಡಿದೆ. ರಿಲಯನ್ಸ್ ಇನ್‌ಫ್ರಾ ಶೇ.0.25, ಒಎನ್‌ಜಿಸಿ ಶೇ.0.51, ಲಾರ್ಸೆನ್ ಅಂಡ್ ಟರ್ಬೋ ಶೇ.0.28, ಸ್ಟೆರ್‌ಲೈಟ್ ಇಂಡಸ್ಟ್ರೀಸ್ ಶೇ.0.34, ಟಾಟಾ ಸ್ಟೀಲ್ ಶೇ.0.71, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.0.35ರಷ್ಟು ಏರಿಕೆ ಕಂಡಿದೆ.

ಏಷ್ಯನ್ ಮಾರುಕಟ್ಟೆ ಕುಸಿತ ಕಂಡಿದ್ದು ಶೇ.1.25ರಷ್ಟು ಇಳಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ