ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಷೇರು ಮಾರುಕಟ್ಟೆ ಕೊಂಚ ಇಳಿಕೆ ರೀಟೈಲ್ ವಲಯದಲ್ಲಿ ಏರಿಕೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ 55 ಪಾಯಿಂಟ್ ಇಳಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 55.84 ಪಾಯಿಂಟ್ ಅಂದರೆ ಶೇ.0.32ರಷ್ಟು ಇಳಿಕೆ ಕಂಡಿದ್ದು, 17,558.64ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 21.20 ಪಾಯಿಂಟ್ ಅಂದರೆ ಶೇ.0.40ಯಷ್ಟು ಕುಸಿತ ಕಂಡು 5,267.85ಕ್ಕೆ ತಲುಪಿದೆ.

ಬ್ಯಾಂಕಿಂಗ್, ಮೆಟಲ್, ಐಟಿ ಷೇರುಗಳು ಮಾರಾಟದ ಒತ್ತಡ ಅನುಭವಿಸುತ್ತಿದ್ದು, ನೆಗೆಟಿವ್ ಬೆಳವಣಿಗೆಯನ್ನು ತೋರಿಸುತ್ತಿದೆ.

ಇಳಿಕೆ ಕಂಡ ಷೇರುಗಳ ಪೈಕಿ ರಿಲಯನ್ಸ್ ಇಂಡಸ್ಟ್ರೀಸ್ ಶೇ.0.21ರಷ್ಟು ಇಳಿಕೆ ಕಂಡರೆ, ಸ್ಟೆರ್ಲೈಟ್ ಶೇ.0.80, ಟಾಟಾ ಸ್ಟೀಲ್ ಶೇ.0.84, ಇನ್ಫೋಸಿಸ್ ಶೇ.0.48, ವಿಪ್ರೋ ಶೇ.0.47ರಷ್ಟು ಇಳಿದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶೇ.0.74, ಐಸಿಐಸಿಐ ಬ್ಯಾಂಕ್ ಶೇ.1.30ಯಷ್ಟು ಇಳಿಕೆ ಕಂಡಿದೆ.

ಆದರೆ ರೀಟೈಲ್ ಷೇರು ವಲಯದಲ್ಲಿ ಪ್ಯಾಂಟಲೂನ್ಸ್ ರೀಟೈಲ್ ಇಂಡಿಯಾ ಶೇ.1.47ರಷ್ಟು ಏರಿಕೆ ಕಂಡರೆ ಪ್ರೊವೋಗ್ ಶೇ.0.24, ಶಾಪರ್ಸ್ ಸ್ಟಾಪ್ ಶೇ.1.48, ಟ್ರೆಂಡ್ ಲಿಮಿಟೆಡ್ ಶೇ.0.24ರಷ್ಟು ಏರಿಕೆ ಕಂಡಿದೆ.

ಇದೇ ವೇಳೆ ಹಾಂಗ್‌ಕಾಂಗ್‌ನ ಹ್ಯಾಂಗ್ ಸೆಂಗ್ ಷೇರುಪೇಟೆ ಶೇ.0.90ರಷ್ಟು ಏರಿಕೆ ಕಂಡರೆ, ಜಪಾನಿನ ನಿಕ್ಕಿ ಶೇ.0.18ರಷ್ಟು ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ