ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಇಳಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 143 ಪಾಯಿಂಟ್ ಇಳಿಕೆ ಕಂಡಿದೆ.

ಬಿಎಸ್ಇ 30 ಷೇರು ಮಾರುಕಟ್ಟೆ 143.45 ಪಾಯಿಂಟ್ ಅಂದರೆ ಶೇ.0.81ರಷ್ಟು ಇಳಿಕೆ ಕಂಡು17,471.03ಕ್ಕೆ ತಲುಪಿದೆ. ಇದಕ್ಕೂ ಮೊದಲು 173 ಪಾಯಿಂಟ್ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.0.91ರಷ್ಟು ಇಳಿಕೆ ಕಂಡು 5,241.10ಕ್ಕೆ ತಲುಪಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಶೇ.1.83ರಷ್ಟು ಇಳಿಕೆ ಕಾಣುವ ಮೂಲಕ ಷೇರು ಪೇಟೆಗೆ ಇಳಿಕೆಯ ಭಾರ ಹೆಚ್ಚಿಸಿದೆ. ಒಎನ್‌ಜಿಸಿ ಶೇ1.87, ಐಸಿಐಸಿಐ ಬ್ಯಾಂಕ್ ಶೇ.1.47, ಎಚ್‌ಡಿಎಫ್‌ಸಿ ಶೇ.1.29, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.1.15ರಷ್ಟು ಇಳಿಕೆಯಾಗಿದೆ.

ಬಿಎಸ್ಇ 30 ಷೇರುಗಳ ಪೈಕಿ 26 ಷೇರುಗಳು ಇಳಿಕೆ ಕಂಡರೆ ಉಳಿದವು ಏರಿಕೆ ಕಂಡಿವೆ. ಭಾರ್ತಿ ಏರ್ಟೆಲ್ ಶೇ.2ರಷ್ಟು ಏರಿಕೆ ಕಂಡರೆ, ರಿಲಯನ್ಸ್ ಕಮ್ಯುನಿಕೇಶನ್ಸ್ ಶೇ.1.59, ಟಿಸಿಎಸ್ ಶೇ.0.77ರಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ